2017ರಲ್ಲಿ ಎನ್.ನವೀನ್‌ಕುಮಾರ್ ಮತ್ತು ತೇಜಮಣಿ ಮದುವೆಯಾಗಿದ್ದು, 60 ಗ್ರಾಂ ಚಿನ್ನ, ಬಟ್ಟೆ ಇತರ ವಸ್ತುಗಳನ್ನು ನೀಡಿ ಒಟ್ಟು 8ಲಕ್ಷ ರೂ.ವೆಚ್ಚದಲ್ಲಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ತವರು ಮನೆಯಿಂದ 10 ಲಕ್ಷ ರೂ.ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದಾರೆ. ಅಲ್ಲದೆ ತೇಜಮಣಿಗೆ ಬರುತ್ತಿದ್ದ ಸಂಬಳವನ್ನು ತಮಗೆ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದರೆನ್ನಲಾಗಿದೆ.