ಡಿ.2ರಂದು ಪ್ರತಿಭಟನಾ ಮೆರವಣಿಗೆ, ಧರಣಿ

ಹುಣಸೂರು ನಗರದಲ್ಲಿ ರಾಜ್ಯ ಅಹಿಂದ ರೈತಸಂಘದ ವತಿಯಿಂದ ಆಯೋಜನಗೊಂಡಿರುವ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹ ಕುರಿತ ಕರಪತ್ರವನ್ನು ಸಂಘದ ರಾಜ್ಯಾಧ್ಯಕ್ಷ ಸೋಮನಹಳ್ಳಿ ಶಿವಶೇಖರ್ ಬಿಡುಗಡೆ ಮಾಡಿದರು. ಶಿವಕುಮಾರ್, ರಾಜೇಗೌಡ, ಮಹದೇವ್, ಕುಮಾರ್, ಸಣ್ಣನಾಯಕ ಇದ್ದರು.
ಹುಣಸೂರು ನಗರದಲ್ಲಿ ರಾಜ್ಯ ಅಹಿಂದ ರೈತಸಂಘದ ವತಿಯಿಂದ ಆಯೋಜನಗೊಂಡಿರುವ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹ ಕುರಿತ ಕರಪತ್ರವನ್ನು ಸಂಘದ ರಾಜ್ಯಾಧ್ಯಕ್ಷ ಸೋಮನಹಳ್ಳಿ ಶಿವಶೇಖರ್ ಬಿಡುಗಡೆ ಮಾಡಿದರು. ಶಿವಕುಮಾರ್, ರಾಜೇಗೌಡ, ಮಹದೇವ್, ಕುಮಾರ್, ಸಣ್ಣನಾಯಕ ಇದ್ದರು.
Published on
ಹುಣಸೂರು: ರಾಜ್ಯಕ್ಕೆ ಪ್ರತ್ಯೇಕ ತಂಬಾಕು ಮಂಡಳಿ ರಚನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.2ರಂದು ನಗರದಲ್ಲಿ ಕರ್ನಾಟಕ ರಾಜ್ಯ ಅಹಿಂದ ರೈತ ಸಂಘವು ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸೋಮನಹಳ್ಳಿ ಶಿವಶೇಖರ್ ತಿಳಿಸಿದರು.
ಅಂದು ಬೆಳಗ್ಗೆ 10 ಗಂಟೆಗೆ ನಗರದ ಸಂವಿಧಾನ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ನಂತರ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತ್ಯೇಕ ತಂಬಾಕು ಮಂಡಳಿ ರಚನೆ:
ರಾಜ್ಯದಲ್ಲಿ ತಂಬಾಕು ಬೆಳೆಗಾರರಿಗೆ ದಶಕಗಳಿಂದ ಅನ್ಯಾಯವಾಗುತ್ತಿದೆ. ವಿಶ್ವದ ಅತ್ಯುತ್ತಮ ದರ್ಜೆಯ ವರ್ಜೀನಿಯ ತಂಬಾಕನ್ನು ಈ ಭಾಗದ ರೈತರು ಬೆಳೆದರೂ ಪಕ್ಕದ ಆಂಧ್ರಪ್ರದೇಶದ ಬೆಳೆಗಾರರಿಗೆ ನೀಡುವ ದರಕ್ಕಿಂತಲೂ ಕಡಿಮೆ ದರ ನೀಡುತ್ತಿದ್ದಾರೆ. ತಂಬಾಕು ಮಂಡಳಿಯಲ್ಲಿ ಬಹುತೇಕ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಆಂಧ್ರಪ್ರದೇಶದವರೇ ಆಗಿದ್ದು, ಮಂಡಳಿ ಅವರ ಕೈಗೊಂಬೆಯಾಗಿ ವರ್ತಿಸುವ ಮೂಲಕ ಕರ್ನಾಟಕದ ರೈತರಿಗೆ ಅನ್ಯಾಯವೆಸಗುತ್ತಿದೆ. ಹಾಗಾಗಿ ರಾಜ್ಯಕ್ಕೆ ಪ್ರತ್ಯೇಕ ತಂಬಾಕು ಮಂಡಳಿ ರಚಿಸಲು ಆಗ್ರಹಿಸಲಾಗುವುದು ಎಂದು ಸೋಮನಹಳ್ಳಿ ಶಿವಶೇಖರ್ ಆಗ್ರಹಿಸಿದರು.
ಹುಣಸೂರು ನಗರ ಗಡಿಭಾಗದಿಂದ 7 ಕಿ.ಮೀ ವ್ಯಾಪ್ತಿಯ ಭೂಪ್ರದೇಶ ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಈ ಭಾಗದಲ್ಲಿರುವ ರೈತರು ತಮ್ಮ ಜಮೀನಿನ ಸಾಗುವಳಿ ಪತ್ರಕ್ಕಾಗಿ ಸರ್ಕಾರಕ್ಕೆ ವಿವಿಧ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಬೇಕು. ಉದ್ದೂರು ಆಸ್ಪತ್ರೆ ಕಾವಲ್ ಸೊಸೈಟಿ ಜಮೀನಿಗೆ ತುರ್ತಾಗಿ ಸಾಗುವಳಿ ಪತ್ರ ನೀಡಬೇಕು. ಹುಣಸೂರು ಎಪಿಎಂಸಿ ಯಾರ್ಡಿನಲ್ಲಿರುವ ಮಳಿಗೆಗಳಲ್ಲಿ ದಲ್ಲಾಳಿಗಳು ವ್ಯಾಪಾರ ವಹಿವಾಟು ನಡೆಸುವ ಮೂಲಕ ರೈತರಿಗೆ ಅನ್ಯಾಯವೆಸಗುತ್ತಿದ್ದು, ಎಪಿಎಂಸಿಯಲ್ಲಿ ದಲ್ಲಾಳಿಗಳಿಗೆ ಅವಕಾಶ ನೀಡಬಾರದೆಂದು ಒತ್ತಾಯಿಸಲಾಗುವುದು. ಈ ಎಲ್ಲ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಸಂಘದ ನಗರ ಸಂಚಾಲಕ ಶಿವಕುಮಾರ್, ತಾಲೂಕು ಉಪಾಧ್ಯಕ್ಷರಾದ ಚಿಲ್ಕುಂದ ಕುಮಾರ್, ರಾಜೇಗೌಡ, ಸಂಘಟನಾ ಕಾರ್ಯದರ್ಶಿ ಮಹದೇವ್, ಸಣ್ಣನಾಯಕ ಇದ್ದರು. ಇದೇ ವೇಳೆ ಪ್ರತಿಭಟನೆ ಕುರಿತ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
-------------
25ಊಓ2: ಹುಣಸೂರು ನಗರದಲ್ಲಿ ರಾಜ್ಯ ಅಹಿಂದ ರೈತಸಂಘದ ವತಿಯಿಂದ ಆಯೋಜನಗೊಂಡಿರುವ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹ ಕುರಿತ ಕರಪತ್ರವನ್ನು ಸಂಘದ ರಾಜ್ಯಾಧ್ಯಕ್ಷ ಸೋಮನಹಳ್ಳಿ ಶಿವಶೇಖರ್ ಬಿಡುಗಡೆ ಮಾಡಿದರು. ಶಿವಕುಮಾರ್, ರಾಜೇಗೌಡ, ಮಹದೇವ್, ಕುಮಾರ್, ಸಣ್ಣನಾಯಕ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net