ಹುಣಸೂರು ತಾಲೂಕು ವಿನೋಬಾ ಕಾಲನಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಬೋವಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಎಚ್.ಪಿ.ಮಂಜುನಾಥ್, ಸೀತಾರಾಮ, ರಾಮಯ್ಯ, ಚೆನ್ನವೀರಯ್ಯ ಮತ್ತಿತರರಿದ್ದರು.
Published on:
Copied
Follow Us
ಹುಣಸೂರು : ರಾಜ್ಯ ಸರ್ಕಾರ ಬೋವಿ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ರಾಜ್ಯ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಸಂತಸ ವ್ಯಕ್ತಪಡಿಸಿದರು.
ತಾಲೂಕಿನ ವಿನೋಬಾ ಕಾಲೋನಿಯಲ್ಲಿ ಬೋವಿ ಸಮಾಜದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜಕ್ಕೆ ನೆರವಾದವರ ಬೆಂಬಲಕ್ಕೆ ನಿಲ್ಲಬೇಕೆಂದು ಆಶಿಸಿ, ಅಂಬೇಡ್ಕರ್ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪ್ರತಿ ಜಿಲ್ಲೆಗಳಲ್ಲೂ ಬೋವಿ ಅಭಿವೃದ್ಧಿ ನಿಗಮದ ಶಾಶ್ವತ ಕಚೇರಿಗಳನ್ನು ಸ್ಥಾಪಿಸಿ, ಸಮುದಾಯದ ಯುವಜನರಿಗೆ ಅಗತ್ಯ ಕೌಶಲ ತರಬೇತಿ ನೀಡಲಿದ್ದೇವೆ. ತಾವು ಈಗಾಗಲೇ ಏಳು ಜಿಲ್ಲೆಗಳಲ್ಲಿ ಪ್ರವಾಸಮಾಡಿದ್ದು, ಮುಂದೆ ಎಲ್ಲ ಜಿಲ್ಲೆಗಳಿಗೂ ಭೇಟಿ ಇತ್ತು ಮಾಹಿತಿ ಸಂಗ್ರಹಿಸಿ, ಕಾರ್ಯಕ್ರಮ ರೂಪಿಸುತ್ತೇನೆ. ಜ.17-18ರಂದು ಬೆಂಗಳೂರಿನ ಜ್ಞಾನಭಾರತಿಯಲ್ಲಿ 300ಕ್ಕೂ ಹೆಚ್ಚು ಯುವಜನರಿಗೆ ವಿವಿಧ ಕೌಶಲ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ನಿಗಮದ ವತಿಯಿಂದ ಭೂರಹಿತ ಮಹಿಳೆಯರಿಗೆ ಭೂಒಡೆತನ ಕಲ್ಪಿಸುವುದು, ಗಂಗಾಕಲ್ಯಾಣ ಯೋಜನೆಗೆ ಆದ್ಯತೆ ನೀಡುವೆ, ಕಾರು ಸೌಲಭ್ಯಕ್ಕಿಂತ ಕುಲ ಕಸುಬಿಗೆ ಅನುಕೂಲವಾಗುವಂತೆ ಯಂತ್ರೋಪಕರಣಗಳು, ಟ್ರ್ಯಾಕ್ಟರ್, ಗೂಡ್ಸ್ ವ್ಯಾನ್‌ಖರೀದಿಗೆ, ಹೈನುಗಾರಿಕೆಗೆ ಪ್ರೋತ್ಸಾಹ, ಮಹಿಳಾ ಸ್ವಸಹಾಯ ಸಂಘಕ್ಕೆ ಐದು ಲಕ್ಷ ರೂ. ಸಾಲಸೌಲಭ್ಯ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಸದ್ವಿನಿಯೋಗ ಮಾಡಿಕೊಳ್ಳಿ ಎಂದರು.
ಸಿದ್ದರಾಮೋತ್ಸವ 28ಕ್ಕೆ: ಮೈಸೂರಿನ ಕಲಾಮಂದಿರದಲ್ಲಿ ಜ.28ಕ್ಕೆ ಸಿದ್ದರಾಮೋತ್ಸವ ಸಮಾವೇಶ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಶಿವರಾಜ ತಂಗಡಗಿ, ಸಮಾಜದ ಸ್ವಾಮೀಜಿಗಳು ಭಾಗವಹಿಸಲಿದ್ದು, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ದೇವರಾಜ ಅರಸರ ಕನಸಿನ ವಿನೋಬಾ ಕಾಲನಿಯು ನನ್ನೂರು ಎಂದು ಭಾವಿಸಿ ಗ್ರಾಮಸ್ಥರ ಬೇಡಿಕೆಯಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಇದೀಗ ವಿನೋಬಾ ಕಾಲನಿಯ ಭೋವಿ ಸಮುದಾಯ ಭವನಕ್ಕೆ ಸರ್ಕಾರದಿಂದ 15ಲಕ್ಷ ರೂ., ಹೊನ್ನಿಕುಪ್ಪೆ, ಮೂಕನಹಳ್ಳಿ ಸಮುದಾಯ ಭವನಕ್ಕೆ ತಲಾ 10ಲಕ್ಷ ರೂ.ಸೇರಿದಂತೆ 35ಲಕ್ಷ ರೂ.ಅನುದಾನವನ್ನು ಮುಖ್ಯಮಂತ್ರಿ, ಜಿಲ್ಲಾಮಂತ್ರಿ ಬಿಡುಗಡೆ ಮಾಡಿದ್ದಾರೆಂದು ಘೋಷಿಸಿ, ಮುಂದೆಯೂ ಸಮುದಾಯದ ಪರವಾಗಿ ನಿಲ್ಲುವೆ. ಕಳೆದ ಅವಧಿಯಲ್ಲಿ ಸಣ್ಣ ನೀರಾವರಿ ಮಂತ್ರಿಯಾಗಿದ್ದ ಶಿವರಾಜ್ ತಂಗಡಗಿ ಅವರ ಸಹಕಾರದಿಂದ ತಾಲೂಕಿಗೆ ಏಳು ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಸದಾ ಕೃತಜ್ಞನಾಗಿರುವೆ ಎಂದರು.
ಬೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮು, ಗ್ರಾಪಂ ಮಾಜಿ ಅಧ್ಯಕ್ಷ ರಾಮಯ್ಯ, ತಾಪಂ ಮಾಜಿ ಸದಸ್ಯ ಚಿನ್ನವೀರಯ್ಯ, ಮುಖಂಡರಾದ ಕುನ್ನೇಗೌಡ, ಕುಪ್ಪುಸ್ವಾಮಿ, ಗಣೇಶ್, ಸುಧಾಕರ್ ಮಾತನಾಡಿದರು.
ಕಾಂಗ್ರೆಸ್ ಅಧ್ಯಕ್ಷರಾದ ರವಿಪ್ರಸನ್ನ, ಪ್ರೇಮಕುಮಾರ್, ಬೋವಿ ಸಮಾಜದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಪಿ.ಈರಯ್ಯ, ಉಮಾಶಂಕರ್, ನಾಗರಾಜ್, ಮಹದೇವ, ತಿಮ್ಮರಸ, ದೇವರಾಜ್, ತಿಮ್ಮರಾಜು, ರಾಮಣ್ಣ, ವೆಂಕಟೇಶ್, ಶೇಖರ್ ಮತ್ತಿತರರಿದ್ದರು.