ಹುಣಸೂರು ಹಂಟರ್ಸ್‌ ತಂಡ ನಾಲ್ಕನೇ ಬಾರಿ ಚಾಂಪಿಯನ್

ಹುಣಸೂರು ನಗರದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹುಣಸೂರು ಹಂಟರ್ಸ್‌ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ನಾಯಕ ಚನ್ನಕೇಶವ, ವ್ಯವಸ್ಥಾಪಕ ಸಿದ್ದೇಶ್ವರ ಇತರರಿದ್ದರು.
ಹುಣಸೂರು ನಗರದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹುಣಸೂರು ಹಂಟರ್ಸ್‌ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ನಾಯಕ ಚನ್ನಕೇಶವ, ವ್ಯವಸ್ಥಾಪಕ ಸಿದ್ದೇಶ್ವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೆಸ್ಕ್ ಹುಣಸೂರು ಡಿವಿಷನ್ ಕ್ರಿಕೆಟ್ ಕಪ್ ಸೀಸನ್ 4
  • ಚಾಂಪಿಯನ್ ಆಗಿ ಸತತ ನಾಲ್ಕನೇ ಬಾರಿ
ಹುಣಸೂರು: ಸೆಸ್ಕ್ ಹುಣಸೂರು ಡಿವಿಷನ್ ಕ್ರಿಕೆಟ್ ಕಪ್ ಸೀಸನ್ 4ರ ಚಾಂಪಿಯನ್ ಆಗಿ ಸತತ ನಾಲ್ಕನೇ ಬಾರಿ ನಾಯಕ ಚನ್ನಕೇಶವರ ನಾಯಕತ್ವದ ಹುಣಸೂರು ಹಂಟರ್ಸ್‌ ತಂಡ ಹೊರಹೊಮ್ಮಿತು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಅಂತಿಮ ಪಂದ್ಯದ ರೋಚಕ ಹಣಾಹಣಿಯಲ್ಲಿ ಸರಗೂರು ಪವರ್ ಸ್ಟಾರ್ ತಂಡದ ವಿರುದ್ಧ ಸೂಪರ್ ಓವರ್ ಮೂಲಕ ಹುಣಸೂರು ಹಂಟರ್ಸ್‌ ಗೆಲುವಿನ ನಗೆ ಬೀರಿತು. 8 ಓವರ್‌ಗಳಿಗೆ 54 ರನ್‌ಗಳಿಸಿದ್ದ ಹುಣಸೂರು ಹಂಟರ್ಸ್‌ ತಂಡದ ಮೊತ್ತವನ್ನು ಸರಗೂರು ಪವರ್‌ಸ್ಟಾರ್ ತಂಡ 8 ಓವರ್‌ಗಳಲ್ಲಿ 54 ರನ್ ಗಳಿಸಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಪಂದ್ಯ ಡ್ರಾ ಆಯಿತು.
ತದನಂತರ ನಡೆದ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಹುಣಸೂರು ಹಂಟರ್ಸ್‌ ತಂಡ 10 ರನ್ ಗಳಿಸಿ ಒಂದು ವಿಕೆಟ್ ಕಳದುಕೊಂಡರೆ, ಸರಗೂರು ಪವರ್ ಸ್ಟಾರ್‌ತಂಡ ಕೇವಲ ಮೂರು ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲನುಭವಿಸಿತು.
ಪಂದ್ಯಾವಳಿಯಲ್ಲಿ ಹುಣಸೂರು, ಬಿಳಿಕೆರೆ ಸರಗೂರು ಮತ್ತು ಎಚ್ ಡಿ ಕೋಟೆ ಉಪವಿಭಾಗಗಳಿಂದ ಒಟ್ಟು 12 ತಂಡಗಳು ಭಾಗವಹಿಸಿದ್ದವು, ರನ್ನರ್ ಅಪ್ ಆಗಿ ದ್ವಿತೀಯ ಸರಗೂರು ಪವರ್ ಸ್ಟಾರ್, ಮೂರನೇ ಸ್ಥಾನವನ್ನು ಹುಣಸೂರಿನ ಪವರ್ ಸ್ಟ್ರೈಕರ್ಸ್ ತಂಡವು ಪಡೆದುಕೊಂಡವು. ಟೂರ್ನಿಯ ಬೆಸ್ಟ್ ಬ್ಯಾಟ್ಸ್ಮನ್ ಆಗಿ ಹುಣಸೂರು ಹಂಟರ್ಸ್ ತಂಡದ ಎಂ.ರಾಜು, ಬೆಸ್ಟ್ ಬೌಲರ್ ಆಗಿ ಸರಗೂರು ಪವರ್ ಸ್ಟಾರ್ ತಂಡದ ರಾಕೇಶ್ ಹಾಗೂ ಟೂರ್ನಿಯ ಬೆಸ್ಟ್ ಫೀಲ್ಡರ್ ಆಗಿ ಹುಣಸೂರು ಪವರ್ ಸ್ಟ್ರೈಕರ್ ತಂಡದ ಆಕಾಶ್ ಪ್ರಶಸ್ತಿ ಗಳಿಸಿದರು. ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಹುಣಸೂರು ಹಂಟರ್ಸ್ ತಂಡದ ಶಶಿಧರ್ ರಿಜಿ ಪಡೆದುಕೊಂಡರು.
ಟೂರ್ನಿ ವ್ಯವಸ್ಥಾಪಕ ಸಿದ್ದೇಶ್ವರ, ಐ.ಸಿ.ಬಸವರಾಜ್, ಶಾಂತರಾಜ್, ಶೇಖರ್, ಜಗದೀಶ್, ದೇವೇಂದ್ರ, ಮಂಜುನಾಥ್, ಮೋಹನ, ಶಶಿ, ಮಹದೇವ್, ಮಹೇಶ್ ರಿಜಿ, ಶೇಖರ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net