ಅದ್ದೂರಿಯಾಗಿ ನೆರವೇರಿದ ಶ್ರೀರಾಮ ಪಟ್ಟಾಭಿಷೇಕ

ಹುಣಸೂರು ನಗರದ ಬ್ರಾಹ್ಮಣರ ಬೀದಿಯ ಶ್ರೀರಾಮಮಂದಿರದಲ್ಲಿ ಶ್ರೀರಾಮ ಪಟ್ಟಾಭಿಷೇಕದ ಅಂಗವಾಗಿ ವಿದ್ವಾನ್ ಹ.ರಾ.ನಾಗರಾಜಾಚಾರ್ಯ ಅವರಿಂದ ವಾಲ್ಮೀಕಿ ರಾಮಾಯಣ ಪ್ರವಚನ ನಡೆಯಿತು.
ಹುಣಸೂರು ನಗರದ ಬ್ರಾಹ್ಮಣರ ಬೀದಿಯ ಶ್ರೀರಾಮಮಂದಿರದಲ್ಲಿ ಶ್ರೀರಾಮ ಪಟ್ಟಾಭಿಷೇಕದ ಅಂಗವಾಗಿ ವಿದ್ವಾನ್ ಹ.ರಾ.ನಾಗರಾಜಾಚಾರ್ಯ ಅವರಿಂದ ವಾಲ್ಮೀಕಿ ರಾಮಾಯಣ ಪ್ರವಚನ ನಡೆಯಿತು.
Published on
ಹುಣಸೂರು: ನಗರದ ಬ್ರಾಹ್ಮಣರ ಬೀದಿಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಪಟ್ಟಾಭಿಷೇಕ ಧಾರ್ಮಿಕ ಕಾರ್ಯಕ್ರಮ ಭಾನುವಾರ ಅದ್ದೂರಿಯಿಂದ ನೆರವೇರಿತು.
ಮಂದಿರದಲ್ಲಿ ಬೆಳಗ್ಗೆಯಿಂದಲೇ ಪುರೋಹಿತ ನಾರಾಯಣ್ ಮೂರ್ತಿ ಮತ್ತು ತಂಡದವರಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ರಾಮ ಪಟ್ಟಾಭಿಷೇಕದ ಅಂಗವಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ವಿದ್ವಾನ್ ಡಾ.ಹ.ರಾ.ನಾಗರಾಜಾಚಾರ್ಯ ಅವರಿಂದ ವಾಲ್ಮೀಕಿ ರಾಮಾಯಣ ಪ್ರವಚನ ಆಯೋಜಿಸಲಾಗಿತ್ತು.
ಸೋಮವಾರ ವಸಂತೋತ್ಸದ ಅಂಗವಾಗಿ ಬ್ರಾಹ್ಮಣರ ಬಡಾವಣೆಯಲ್ಲಿ ಓಕುಳಿ ಉತ್ಸವ ನಡೆಸಿದರು. ಮಕ್ಕಳು ಓಕುಳಿ ಉತ್ಸವ ಆಯೋಜಿಸುವ ಮೂಲಕ ಸಂಭ್ರಮಿಸಿದರು. ಅಲಂಕೃತ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿದರು. ಮನೆ ಮನೆಯಿಂದ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಭಕ್ತರು ಧನ್ಯತೆ ಅನುಭವಿಸಿದರು. ಭಕ್ತರಿಗೆ ದಾಸೋಹ ಹಮ್ಮಿಕೊಳ್ಳಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net