ಮಕ್ಕಳ ಆರೋಗ್ಯ ರಕ್ಷಣೆ ಸರ್ಕಾರದ ಕರ್ತವ್ಯ

 ಹುಣಸೂರು ನಗರದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ನಗರಸಭೆ ಪೌರಾಯುಕ್ತೆ ಎಂ.ಮಾನಸಾ ಚಾಲನೆ ನೀಡಿದರು. ಡಾ.ರವಿಕುಮಾರ್, ಡಾ.ಶಿವಶಂಕರ್ ಇತರರಿದ್ದರು.
ಹುಣಸೂರು ನಗರದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ನಗರಸಭೆ ಪೌರಾಯುಕ್ತೆ ಎಂ.ಮಾನಸಾ ಚಾಲನೆ ನೀಡಿದರು. ಡಾ.ರವಿಕುಮಾರ್, ಡಾ.ಶಿವಶಂಕರ್ ಇತರರಿದ್ದರು.
Published on
ಹುಣಸೂರು : ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ಪಲ್ಸ್ ಪೋಲಿಯೋ ಹನಿ ಅಭಿಯಾನಕ್ಕೆ ನಗರಸಭೆ ಪೌರಾಯುಕ್ತೆ ಎಂ.ಮಾನಸಾ ಮಗುವಿಗೆ ಹನಿ ಹಾಕುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳ ಆರೋಗ್ಯ ರಕ್ಷಣೆ ಸರ್ಕಾರದ ಕರ್ತವ್ಯ. ಒಂದು ಕಾಲದಲ್ಲಿ ಶಾಪವೆಂದೇ ಪರಿಗಣಿತವಾಗಿದ್ದ ಪೋಲಿಯೋ ಇಂದು ದೇಶದಿಂದಮುಕ್ತಗೊಂಡಿದೆ. ಸಂಘ -ಸಂಸ್ಥೆಗಳ ಸಹಯೋಗದಲ್ಲಿ ದೇಶಾದ್ಯಂತ ಮೂರು ದಿನಗಳ ಕಾಲ ಅಭಿಯಾನ ಯಶಸ್ವಿಯಾಗಿ ನೆರವೇರಬೇಕಿದೆ. ಪಾಲಕರು ತಮ್ಮ ಮನೆಯಲ್ಲಿ 0-5 ವರ್ಷದ ಮಗುವಿದ್ದಲ್ಲಿ ಸಮೀಪದ ಲಸಿಕಾ ಬೂತ್‌ಗಳಿಗೆ ಕರೆತಂದು ಹನಿ ಹಾಕಿಸುವ ಮೂಲಕ ಅಭಿಯಾನ ಯಶಸ್ವಿಗೆ ಸಹಕರಿಸಬೇಕೆಂದು ಕೋರಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಗ್ರಾಮಾಂತರ ಬಸ್ ನಿಲ್ದಾಣ ಮತ್ತು ಬಿಳಿಕೆರೆ ಬಸ್ ನಿಲ್ದಾಣದಲ್ಲಿ ಒಟ್ಟು ಎರಡು ಟ್ರಾನ್ಸಿಕ್ಟ್ ಪಾಯಿಂಟ್ ಬೂತ್‌ಗಳನ್ನು ತೆರೆಯಲಾಗಿದೆ. ಪ್ರಯಾಣದಲ್ಲಿರುವ ನಾಗರಿಕರು ತಮ್ಮೊಂದಿಗೆ ಮಗುವಿದ್ದರೆ ಈ ಬೂತ್‌ಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದರು.
ನಗರದ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಿವಶಂಕರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ವೈದ್ಯರು, ಸಿಬ್ಬಂದಿ ಮತ್ತು ಮುಖಂಡರು ಭಾಗವಹಿಸಿದ್ದರು. ತಾಲೂಕು ನೋಡಲ್ ಅಧಿಕಾರಿ ಡಾ.ಬೃಂದಾ ತಾಲೂಕಿನಾದ್ಯಂತ ಸಂಚರಿಸಿ ಅಭಿಯಾನ ಪರಿಶೀಲಿಸಿದರು.
ಶೇ.99.91 ಸಾಧನೆ
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ವಿಜಯವಾಣಿಯೊಂದಿಗೆ ಮಾತನಾಡಿ, ಮೊದಲ ದಿನ ತಾಲೂಕಿನಲ್ಲಿ ಶೇ.99.91 ಸಾಧನೆ ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು 17,078 ಮಕ್ಕಳನ್ನು ಗುರುತಿಸಲಾಗಿದ್ದು, ಮೊದಲ ದಿನ 17,063 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಈ ಪೈಕಿ ಎರಡು ಟ್ರಾನ್ಸಿಕ್ಟ್ ಪಾಯಿಂಟ್‌ಗಳಲ್ಲಿ 217 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಗ್ರಾಮಾಂತರ ಭಾಗಗಳಲ್ಲಿ 13,442, ನಗರ ವ್ಯಾಪ್ತಿಯಲ್ಲಿ 3,555 ಮಕ್ಕಳಿಗೆ ಹಾಕಲಾಗಿದೆ. ಒಟ್ಟು 988 ವಯಲ್‌ಗಳನ್ನು ಉಪಯೋಗಿಸಲಾಗಿದೆ. ಮುಂದಿನ ಎರಡು ದಿನಗಳು ಗ್ರಾಮಾಂತರ ಭಾಗಗಲ್ಲಿ ಆರೋಗ್ಯ ಸಿಬ್ಬಂದಿ ಮನೆಗಳಿಗೆ ತೆರಳಿ ಹನಿ ಹಾಕಲಿದ್ದಾರೆಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net