ಕಾಟವಾಳುನಲ್ಲಿ ಹುಲಿ ಮಾಸ್ತಮ್ಮ ಜಾತ್ರೆ ಸಡಗರ

ಸರಗೂರು ತಾಲೂಕಿನ ಕಾಟವಾಳು ಗ್ರಾಮದಲ್ಲಿ ಹುಲಿಮಾಸ್ತಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಕೊಂಡೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಸರಗೂರು ತಾಲೂಕಿನ ಕಾಟವಾಳು ಗ್ರಾಮದಲ್ಲಿ ಹುಲಿಮಾಸ್ತಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಕೊಂಡೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • Huli Masthamma
ಸರಗೂರು: ತಾಲೂಕಿನ ಕಾಟವಾಳು ಗ್ರಾಮದ ಹುಲಿ ಮಾಸ್ತಮ್ಮ ಜಾತ್ರೆ ಅಂಗವಾಗಿ ಕೊಂಡೋತ್ಸವ, ವಿಶೇಷ ಪೂಜೆ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ದೇವರಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗಿನ ಜಾವದಿಂದಲೇ ಗಣಪತಿ ಹೋಮ, ಪುಣ್ಯಾಹಿ, ಕಸ ಪ್ರತಿಷ್ಠಾಪನೆ, ದುರ್ಗಾಹೋಮ, ಕುಂಕುಮಾರ್ಚನೆ ಸೇರಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ಬುಧವಾರ ದೇವರಿಗೆ ಪಂಜಿನ ಸೇವೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಗುರುವಾರ ಬೆಳಗ್ಗೆ ನದಿಗೆ ತೆರಳಿ ಗಂಗೆಪೂಜೆ ನಡೆಸಿ ಹುಲಿಮಾಸ್ತಮ್ಮ ಉತ್ಸವಮೂರ್ತಿಯನ್ನು ಪೂರ್ಣಕುಂಭ ಕಳಶದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯ, ಸತ್ತಿಗೆ, ವೀರಗಾಸೆ ಕುಣಿತ ಹಾಗೂ ಕಲಾತಂಡಗಳ ಸಹಿತ ಮೆರವಣಿಗೆ ನಡೆಸಲಾಯಿತು. ದೇವಾಲಯಕ್ಕೆ ತಲುಪಿದ ನಂತರ ವಿಶೇಷ ಪೂಜೆ ನಡೆಸಿ, ಮಹಾಮಂಗಳಾರತಿ ಮಾಡಿ ಉತ್ಸವಮೂರ್ತಿಯನ್ನು ರಥದ ಮೇಲೆ ಕೂರಿಸಿ ಶ್ರದ್ಧಾಭಕ್ತಿಯಿಂದ ಭಕ್ತರು ಎಳೆದರು. ಬಾಲಕಿಯರು ಪೂರ್ಣಕುಂಭ ಕಳಶ ಹೊತ್ತು ಸಾಗಿದರು. ದೇವರ ಉತ್ಸವಮೂರ್ತಿ ದೇವಸ್ಥಾನ ಬಳಿ ಬಂದ ಕೂಡಲೇ ಭಕ್ತರು ಕೊಂಡೋತ್ಸವದಲ್ಲಿ ಭಾಗಿಯಾಗದರು.
ಕಾಟವಾಳು ಗ್ರಾಮದ ಗೌಡಿಕೆ ಕೆ.ಎಸ್.ವೀರಭದ್ರಪ್ಪ, ಕೆ.ಎ.ರಾಜಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮುತ್ತುರಾಜು, ಕೆ.ಎಂ.ಬಸಪ್ಪ, ಜಿ.ಗುರುಸ್ವಾಮಿ, ಶಿವರುದ್ರಪ್ಪ, ಪರಶಿವಮೂರ್ತಿ, ಕೆ.ಎಸ್.ಮಂಜು, ಕೆ.ಎಸ್.ಮಲ್ಲಪ್ಪ, ಬಸವರಾಜಪ್ಪ, ಗುರುಸ್ವಾಮಿ, ಮಂಜು, ಸಿದ್ದು, ಸುನೀಲ್, ಶೇಖರ್, ಮಹದೇವಸ್ವಾಮಿ, ಮಲ್ಲಿಕಾರ್ಜುನ, ನಿಜಗುಣ, ಮಹೇಂದ್ರ, ಆನಂದ, ಮಹದೇವಸ್ವಾಮಿ, ಚಂದ್ರಮೌಳಿ, ಸೋಮಪ್ಪ ಸೇರಿದಂತೆ ಗ್ರಾಮಸ್ಥರು, ಯುವಕ ಮಂಡಳಿಯವರು ಭಾಗವಹಿಸಿದ್ದರು. ಕಾಟವಾಳು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು..
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net