ಮಳೆಗಾಳಿಯಿಂದ ಮನೆಗೆ ಹಾನಿ

ಚಿಕ್ಕಕಮರವಳ್ಳಿ ಗ್ರಾಮದ ನಿವಾಸಿ ಮಲ್ಲಿಗೆಸ್ವಾಮಿ ಅವರ ಮನೆಗೆ ಮಳೆ ಗಾಳಿಯಿಂದ ಹಾನಿ ಉಂಟಾಗಿರುವುದು.
ಚಿಕ್ಕಕಮರವಳ್ಳಿ ಗ್ರಾಮದ ನಿವಾಸಿ ಮಲ್ಲಿಗೆಸ್ವಾಮಿ ಅವರ ಮನೆಗೆ ಮಳೆ ಗಾಳಿಯಿಂದ ಹಾನಿ ಉಂಟಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • House damaged
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಿಕ್ಕಕಮರವಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ನಿವಾಸಿಯೊಬ್ಬರ ಮನೆಗೆ ಹಾನಿ ಉಂಟಾಗಿದೆ.
ಗ್ರಾಮದ ನಿವಾಸಿ ಮಲ್ಲಿಗೆ ಸ್ವಾಮಿ ಅವರ ಮನೆಯಾಗಿದ್ದು, ಗಾಳಿ ಮಳೆಯಿಂದ ಮನೆಯ ಛಾವಣಿ ಸಂಪೂರ್ಣ ಜಖಂಗೊಂಡಿದೆ. ಅಲ್ಲದೆ, ಗೋಡೆಗಳು ಬಿರುಕು ಬಿಟ್ಟಿದ್ದು, ಮಾರಾಟಕ್ಕೆ ಮನೆಯಲ್ಲಿ ಶೇಖರಿಸಿ ಇರಿಸಿದ ಭತ್ತ ಮತ್ತು ರಾಗಿಯು ಮಳೆಯ ನೀರಿನಿಂದ ಸಂಪೂರ್ಣ ಹಾಳಾಗಿ ಹೋಗಿ, ನಷ್ಟ ಉಂಟಾಗಿದೆ. ಕೃಷಿ ಚಟುವಟಿಕೆ ಹಾಗೂ ಕೂಲಿ ಮಾಡಿಕೊಂಡು ನಾವು ಜೀವನ ಸಾಗಿಸುತ್ತಿದ್ದು, ಗಾಳಿ ಮಳೆಯಿಂದ ನಮ್ಮ ಮನೆಯು ಒಂದು ಕಡೆ ಹಾಳಾದರೆ ಬೆಳೆ ಕೂಡ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಇದರಿಂದ ಅಪಾರ ನಷ್ಟ ಉಂಟಾಗಿದೆ. ಇದನ್ನು ಸರ್ಕಾರ ಗಮನಿಸಿ ಪರಿಹಾರ ನೀಡಬೇಕು ಎಂದು ಮಲ್ಲಿಗೆ ಸ್ವಾಮಿ ಅವರ ಪುತ್ರ ಜೀವನ್ ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net