ಶಾಸಕ ಕೆ. ಹರೀಶ್‌ಗೌಡ ಮಾತನಾಡಿ, ಏಕಲವ್ಯನಗರ ಬಡಾವಣೆಯಲ್ಲಿ ಜೆಎನ್-ನರ್ಮ್ ಬಿ.ಎಸ್.ಯು.ಪಿ. ಯೋಜನೆಯಡಿ ನಿರ್ಮಿಸಲಾಗಿರುವ ಜಿ+3 ಮಾದರಿ ವಸತಿ ಸಮುಚ್ಚ್ಛಯಗಳಲ್ಲಿ ಖಾಲಿ ಇರುವ ಮನೆಗಳನ್ನು ಹಂಚಿಕೆ ಮಾಡಲು ನಿಯಮಾನುಸಾರ ಫಲಾನುಭವಿಗಳ ಪಟ್ಟಿ ಸಿದ್ಧ್ದಪಡಿಸಿದ್ದು, ಸುಮಾರು ವರ್ಷಗಳಿಂದ ಹಂಚಿಕೆ ಮಾಡಿರಲಿಲ್ಲ. ಇದೀಗ 22 ಫಲಾನುಭವಿ ಮನೆ ಹಂಚಿಕೆ ಮಾಡಿದ್ದು, ಉಳಿಕೆ ಇರುವ ಮನೆಗಳನ್ನು ಸಹ ಫಲಾನುಭವಿಗಳ ಪಟ್ಟಿಯಲ್ಲಿರುವಂತೆ ಪರಿಶೀಲಿಸಿ ಲಾಟರಿ ಮುಖಾಂತರ ಅವರಿಗೂ ಹಂಚಿಕೆ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.