ಮೈಸೂರಿನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಎಚ್‌ಐವಿ/ಏಡ್ಸ್ ಕುರಿತು ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ಆಸ್ಪತ್ರೆಯ ಐಸಿಟಿಸಿ ಸೆಂಟರ್‌ನ ಆಪ್ತಸಮಾಲೋಚಕಿ ಬಿ.ನಂದಿನಿ ಮಾತನಾಡಿದರು. ಡಾ.ಬಿ.ಆರ್. ಜಯಕುಮಾರಿ, ಡಾ.ಜಿ.ದೊಡ್ಡರಸಯ್ಯ, ಎಲ್. ನಿರಂಜನ್, ಜ್ಯೋತಿ ಇದ್ದರು.
ಮೈಸೂರು: ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ವತಿಯಿಂದ ಕಾಲೇಜಿನಲ್ಲಿ ಎಚ್‌ಐವಿ/ಏಡ್ಸ್ ಕುರಿತು ಬುಧವಾರ ಅರಿವು ಕಾರ್ಯಕ್ರಮ ನಡೆಯಿತು.
ಜೆ.ಎಸ್.ಎಸ್. ಆಸ್ಪತ್ರೆಯ ಐಸಿಟಿಸಿ ಸೆಂಟರ್‌ನ ಆಪ್ತಸಮಾಲೋಚಕಿ ಬಿ.ನಂದಿನಿ ಅವರು ಎಚ್‌ಐವಿ ಹರಡುವ ವಿಧಾನಗಳು, ಮುನ್ನೆಚ್ಚರಿಕಾ ಕ್ರಮಗಳು ಮತ್ತು ಸಮಾಜದಲ್ಲಿ ಏಡ್ಸ್ ಪೀಡಿತರ ಕುರಿತು ಇರಬೇಕಾದ ಮಾನವೀಯ ದೃಷ್ಟಿಕೋನದ ಬಗ್ಗೆ ಮಾಹಿತಿ ನೀಡಿದರು. ಯುವಜನತೆ ಈ ಕಾಯಿಲೆಯ ಬಗ್ಗೆ ಸರಿಯಾದ ಮಾಹಿತಿ ಹೊಂದುವ ಮೂಲಕ ಎಚ್‌ಐವಿ. ಹರಡುವುದನ್ನು ತಡೆಯಬೇಕು ಎಂದರು.
ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ಯುವಜನತೆ ಇಂತಹ ಮಾರಕ ರೋಗಗಳ ಬಗ್ಗೆ ಜಾಗೃತರಾಗಬೇಕು ಮತ್ತು ಅರಿವು ಮೂಡಿಸುವ ಕೆಲಸ ಮಾಡಬೇಕು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಬಗ್ಗೆ ಇದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಮತ್ತು ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಬಹಳ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಡಾ.ಜಿ.ದೊಡ್ಡರಸಯ್ಯ, ಎಲ್. ನಿರಂಜನ್, ಲಕ್ಷ್ಮೀದೇವಮ್ಮ ಆಸ್ಪತ್ರೆಯ ಕೌನ್ಸಿಲರ್ ಜ್ಯೋತಿ ಇದ್ದರು.