ಬೆಟ್ಟದಪುರ ಸಮೀಪದ ಹಲಗನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗಕ್ಕೆ ಸುಮಾರು 1.80 ಲಕ್ಷ ರೂ., ವೆಚ್ಚದಲ್ಲಿ ಡೆಕ್ಕನ್ ಟೊಬಾಕೋ ಕಂಪನಿವತಿಯಿಂದ ಉಚಿತವಾಗಿ ನಿರ್ಮಿಸಲಾಗಿರುವ ಹೈಟೆಕ್ ಶೌಚಗೃಹ ಹಸ್ತಾಂತರ ಮಾಡಲಾಯಿತು. ಅಪೊಚ್ ಪಾಷಾ, ಪರ್ವೀಜ್ ಪಾಷಾ, ಶ್ರೀನಿವಾಸ್, ಸುನಿಲ್ ಇತರರಿದ್ದರು.
ಬೆಟ್ಟದಪುರ: ವಿದ್ಯಾರ್ಥಿಗಳ ಆರೋಗ್ಯ, ಸ್ವಚ್ಛತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಡೆಕ್ಕನ್ ಟೊಬಾಕೋ ಕಂಪನಿಯವರು ಸರ್ಕಾರಿ ಶಾಲೆಗೆ ಉಚಿತವಾಗಿ ಹೈಟೆಕ್ ಶೌಚಗೃಹ ನಿರ್ಮಿಸಿ ಕೊಡುಗೆ ನೀಡಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕ ಎಚ್.ಸಿ. ಮಹಾದೇವಪ್ಪ ತಿಳಿಸಿದರು.
ಬೆಟ್ಟದಪುರ ಸಮೀಪದ ಹಲಗನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗಕ್ಕೆ ಸುಮಾರು 1.80 ಲಕ್ಷ ರೂ. ವೆಚ್ಚದಲ್ಲಿ ಡೆಕ್ಕನ್ ಟೊಬಾಕೋ ಕಂಪನಿಯವರು ಉಚಿತವಾಗಿ ಹೈಟೆಕ್ ಶೌಚಗೃಹ ನಿರ್ಮಿಸಿ ಬುಧವಾರ ಕೊಡಗೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲೆಯಲ್ಲಿ ಶೌಚಗೃಹ ಕೊರತೆಯಿಂದ ಮಕ್ಕಳಿಗೆ ಆಗುತ್ತಿದ್ದ ಅನಾನುಕೂಲವನ್ನು ಮನಗಂಡ ಕಂಪನಿ, ತನ್ನ ಸಮಾಜಮುಖಿ ಹೊಣೆಗಾರಿಕೆಯ ಭಾಗವಾಗಿ ಈ ಸೌಲಭ್ಯ ಒದಗಿಸಿದೆ. ನವೀನ ತಂತ್ರಜ್ಞಾನದಿಂದ ನಿರ್ಮಿಸಲಾದ ಈ ಶೌಚಾಲಯದಲ್ಲಿ ನೀರಿನ ಮಿತವ್ಯಯ, ಸ್ವಚ್ಛತೆ ಕಾಪಾಡುವ ವ್ಯವಸ್ಥೆ ಹಾಗೂ ಮಕ್ಕಳಿಗೆ ಅನುಕೂಲಕರವಾದ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಆರೋಗ್ಯಕರ ವಾತಾವರಣ ದೊರೆತಿದ್ದು, ಶಾಲಾ ಹಾಜರಾತಿ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕಂಪನಿಯ ಮ್ಯಾನೇಜರ್ ಅಪೊಚ್ ಪಾಷಾ, ಸಹಾಯಕ ಪರ್ವೀಜ್ ಪಾಷಾ, ಶ್ರೀನಿವಾಸ್, ಸುನಿಲ್, ಗ್ರಾಮಸ್ಥರಾದ ಜಾಮಿಯಾ ಮಸೀದಿ ಅಧ್ಯಕ್ಷ ಸಯಾದ್ ಸುಹೇಲ್, ನರ್ಫೀಸಾ ಖಾನ್, ಹಸೀದ್, ಶಿಕ್ಷಕರಾದ ಆಶಾ, ಆಶಾಮಣಿ, ಸಹನಾ, ಹರ್ಷ, ಕೆ.ಟಿ.ರವಿ ಗ್ರಾಮಸ್ಥರು ಇದ್ದರು.