ಗ್ರಾಮದ ಪುರುಷರು ಮಹಿಳೆಯರ ವೇಷತೊಟ್ಟು ಗಮನ ಸೆಳೆದರು. ಶಿವ, ಶಿವಾಜಿ, ಸನ್ಯಾಸಿ, ಪೊಲೀಸ್ ಅಧಿಕಾರಿ, ಮಾರಮ್ಮ, ಕರಡಿ ಸೇರಿದಂತೆ ವಿವಿಧ ವೇಷತೊಟ್ಟು ಗ್ರಾಮಸ್ಥರು ಗಮನ ಸೆಳೆದರು. ಹಲವಾರು ಜನರು ವಿವಿಧ ದೇವರು, ಭೂತದ ವೇಷಗಳನ್ನು ತೊಟ್ಟು ಗ್ರಾಮದ ಸುತ್ತ ಸಂಭ್ರಮದಿಂದ ಹೆಜ್ಜೆ ಹಾಕಿದರು. ನಂತರ ದೇವಸ್ಥಾನ ಆವರಣದಲ್ಲಿ ಲಯಬದ್ಧ ಸಂಗೀತಕ್ಕೆ ಹೆಜ್ಜೆ ಹಾಕಿದರು. ಜಾತ್ರೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ರಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಆಗಮಿಸಿದ್ದರು.