ಶಿಬಿರಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಗರ್ಭಿಣಿಯರ ಆರೈಕೆಯಲ್ಲಿ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ವೈದ್ಯರ ಸಲಹೆ ಮೇರೆಗೆ ಪ್ರಸವಪೂರ್ವ ವಿಟಮಿನ್‌ಗಳ (ಫೋಲಿಕ್ ಆಮ್ಲ, ಕ್ಯಾಲ್ಸಿಯಂ, ಕಬ್ಬಿಣ) ಸೇವನೆ ಮುಖ್ಯ. ಜತೆಗೆ ಮಾನಸಿಕ ಬೆಂಬಲ, ವಿಶ್ರಾಂತಿ, ನಾರಿನಾಂಶಯುಕ್ತ ಆಹಾರ, ಸಾಕಷ್ಟು ನೀರು ಕುಡಿಯುವುದು ಮತ್ತು ಮದ್ಯಪಾನ, ಧೂಮಪಾನದಿಂದ ದೂರವಿರುವುದು ಅಗತ್ಯ. ಪ್ರತಿ ತಿಂಗಳಿಗನುಗುಣವಾಗಿ ಆಹಾರ ಮತ್ತು ಆರೈಕೆಯ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.