ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕ ೃತಿಕ ಸಂಘದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಹವ್ಯಕ-ಪ್ರತಿಬಿಂಬ’ ಕಾರ್ಯಕ್ರಮದಲ್ಲಿ ಸಾಧಕರಾದ ಡಾ. ಸುರೇಶ್ ಹೆಗಡೆ , ವಿದ್ವಾನ್ ನಾರಾಯಣ ಭಟ್, ಶ್ರೀಕಲಾ ವಿಕಾಸ್, ಎನ್.ಟಿ. ಹೆಗಡೆ, ಪಾರ್ವತಿ ಕೃಷ್ಣ ಮಂಜ ಭಟ್, ಸಂಪ ಕೃಷ್ಣ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಡಾ. ಗಿರಿಧರ ಕಜೆ, ಜಿ.ಎಂ. ಹೆಗಡೆ, ನಾರಾಯಣ ವಿ. ಹೆಗಡೆ, ಕೃಷ್ಣ ವಿ. ಹೆಗಡೆ ಹಾಗೂ ಇತರರು ಇದ್ದರು.
Published on:
Copied
Follow Us
ಮೈಸೂರು: ಹವ್ಯಕ ಸಮಾಜವು ಶಿಕ್ಷಣ, ಸಂಸ್ಕೃತಿ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಭೆಗಳ ತವರೂರಾಗಿದೆ ಎಂದು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು.
ಬೆಂಗಳೂರಿನ ಅಖಿಲ ಹವ್ಯಕ ಮಹಾಸಭಾ ಹಾಗೂ ಮೈಸೂರು ಹವ್ಯಕ ಸಂಘದ ವತಿಯಿಂದ ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕ ೃತಿಕ ಸಂಘದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಹವ್ಯಕ-ಪ್ರತಿಬಿಂಬ’ ಕಾರ್ಯಕ್ರಮದಲ್ಲಿ ಹವ್ಯಕ ಮಹಿಳಾ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ಹವ್ಯಕ ಸಮಾಜವು ಸಾಮರಸ್ಯ, ಸಹಬಾಳ್ವೆ ಹಾಗೂ ಸೇವಾ ಮನೋಭಾವಕ್ಕೆ ಹೆಸರುವಾಸಿಯಾಗಿದೆ. ಸಮಾಜದ ಅಭಿವೃದ್ಧಿಯ ಜೊತೆಗೆ ಲೋಕಕಲ್ಯಾಣದ ಧ್ಯೇಯವನ್ನು ಹೊಂದಿರುವ ಈ ಸಮುದಾಯ, ಯಾವುದೇ ಸರ್ಕಾರಿ ಮೀಸಲಾತಿಯ ನೆರವಿಲ್ಲದೆ ಶಿಕ್ಷಣ, ಪುರೋಹಿತಿಕೆ, ಸಾಮಾಜಿಕ ಹಾಗೂ ರಾಷ್ಟ್ರಸೇವೆಯ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಹೇಳಿದರು.
ಹವ್ಯಕ ರತ್ನ ಪ್ರಶಸ್ತಿ ಸ್ವೀಕರಿಸಿದ ಚಾಮರಾಜ ನಗರದ ಉದ್ಯಮಿ ಜಿ.ಎಂ. ಹೆಗಡೆ ಮಾತನಾಡಿ, ನಾನು ಎಂಬುದನ್ನು ಬಿಟ್ಟು ನಾವು ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸಮಾಜಸೇವೆ ಸಲ್ಲಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಸಾಧಕರಾದ ಡಾ. ಸುರೇಶ್ ಹೆಗಡೆ (ಶೈಕ್ಷಣಿಕ), ವಿದ್ವಾನ್ ನಾರಾಯಣ ಭಟ್ (ಜ್ಯೋತಿಷ್ಯ), ಶ್ರೀಕಲಾ ವಿಕಾಸ್ (ಸಮಾಜ ಸೇವೆ), ಎನ್.ಟಿ. ಹೆಗಡೆ (ಸಮಾಜ ಸೇವೆ), ಪಾರ್ವತಿ ಕೃಷ್ಣ ಮಂಜ ಭಟ್ (ಸಮಾಜ ಸೇವೆ), ಸಂಪ ಕೃಷ್ಣ ಮೂರ್ತಿ (ಸಮಾಜ ಸೇವೆ) ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿ ನಾರಾಯಣ ವಿ. ಹೆಗಡೆ, ನಗರ ಹವ್ಯಕ ಸಂಘದ ಅಧ್ಯಕ್ಷ ಕೃಷ್ಣ ವಿ. ಹೆಗಡೆ, ನಗರದ ಜೆ.ಸಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ರಾಮಕೃಷ್ಣ ಹೆಗಡೆ, ಸೆಸ್ಕ್ ನಿವೃತ್ತ ಇಂಜಿನಿಯರ್ ಗೋಪಾಲ್ ಎನ್. ಗಾಂವ್ಕರ್ ಹಾಗೂ ಇತರರು ಇದ್ದರು.