ಬೈಲುಕುಪ್ಪೆ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ

ಚಿಕ್ಕಬನ್ನೂರು ಗ್ರಾಮದ ದೊಡ್ಡಯ್ಯ ಅವರ ಮನೆ ಕಡೆಗೆ ವಿದ್ಯುತ್ ಕಂಬ ವಾಲಿರುವುದು.
ಚಿಕ್ಕಬನ್ನೂರು ಗ್ರಾಮದ ದೊಡ್ಡಯ್ಯ ಅವರ ಮನೆ ಕಡೆಗೆ ವಿದ್ಯುತ್ ಕಂಬ ವಾಲಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬೈಲುಕುಪ್ಪೆ ವ್ಯಾಪ್ತಿಯ ಕೆಲವು ಗ್ರಾಮ
  • ಬಿರುಗಾಳಿ ಸಹಿತ ಆಲಿಕಲ್ಲು ಮಳೆ
ಬೈಲುಕುಪ್ಪೆ: ಬೈಲುಕುಪ್ಪೆ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಸೋಮವಾರ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿಯಿತು.
ಬೈಲುಕುಪ್ಪೆ, ಚಿಕ್ಕಹೂನ್ನೂರು, ದೊಡ್ಡಹೊನ್ನುರು, ತಿರುಮಲಾಪುರ, ಕೂಣಸೂರು, ಜೋಗನಹಳ್ಳಿ, ಬೀಸನಕುಪ್ಪೆ, ದೊಡ್ಡ ಹರವೆ, ಲಾಮಾ ಕ್ಯಾಂಪ್, ಗೋಲ್ಡನ್ ಟೆಂಪಲ್ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಸುರಿದ ಜೋರು ಮಳೆಗೆ ಕೆಲವು ಕಡೆ ಮರ ಮುರಿದು ಬಿದ್ದಿವೆ.
ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಭೂಮಿಗೆ ವರ್ಷದ ಮೊದಲ ಮಳೆ ತಂಪೆರೆದಿದೆ. ಇನ್ನು ಚಿಕ್ಕಬನ್ನೂರು ಗ್ರಾಮದ ದೊಡ್ಡಯ್ಯನ ಮನೆ ಪಕ್ಕದಲ್ಲಿರುವ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಪರಿಣಾಮ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net