ಕೌಡ್ಲೆ ಸಿಎಂಸಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ(ಪ್ರೌಢ ಶಾಲಾ ವಿಭಾಗ) ಗುರುವಂದನಾ ಕಾರ್ಯಕ್ರಮ
ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದ ಸಿಎಂಸಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ(ಪ್ರೌಢ ಶಾಲಾ ವಿಭಾಗ) ಹಿರಿಯ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಶಿಕ್ಷಕರು ಉದ್ಘಾಟಿಸಿದರು. ಡಿ.ವೈ.ಹಾದಿಕಾರ್, ಉಮೇಶ್ ಇಟಗಿ, ಪಿ.ಶಶಿಕಲಾ, ಎಂ.ನಂಜಪ್ಪ, ಎಂ.ಎಸ್.ಸವಿತಾ, ಬಿ.ವಿಜಯ್, ಸುರೇಶ್ ನಾಯ್ಕ, ಸರಿತಾ, ಶೇಖರಯ್ಯ ಕೋಡಿಮಠ್, ಹೀರಲಾಲ್, ಶಿವಪ್ಪ, ಶ್ರೀಧರ್, ಶ್ರೀಕಾಂತ್, ನಾಗೇಶ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
2000 ರಿಂದ 2025ರವರೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿದ ನೂರಾರು ಹಿರಿಯ ವಿದ್ಯಾರ್ಥಿಗಳು ಭಾಗಿ
ಗುರುಗಳು ಜ್ಞಾನದ ದೀಪ, ಅಜ್ಞಾನವೆಂಬ ಕತ್ತಲನ್ನು ಕಳೆಯುವವರು: ಡಿ.ವೈ.ಹಾದಿಕಾರ್
ಶಿಕ್ಷಕರು ಶಿಷ್ಯರ ಭವಿಷ್ಯ ರೂಪಿಸುತ್ತಾರೆ, ಜೀವನಕ್ಕೆ ಮಾರ್ಗದರ್ಶಕರಾಗುತ್ತಾರೆ: ಉಮೇಶ್ ಇಟಗಿ
ಗುರುಗಳು ಜ್ಞಾನದ ದೀಪ, ಅಜ್ಞಾನವೆಂಬ ಕತ್ತಲನ್ನು ಕಳೆಯುವವರು. ಅವರ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಧನ್ಯತೆ ಸಮರ್ಪಣೆ ಮಾಡುವ ಇಂತಹ ಕಾರ್ಯಕ್ರಮಗಳು ಸಾರ್ಥಕ ಕಾರ್ಯ ಎನಿಸುತ್ತವೆ ಎಂದು ಹಿರಿಯ ಶಿಕ್ಷಕ ಡಿ.ವೈ.ಹಾದಿಕಾರ್ ಹೇಳಿದರು.
ಇಲ್ಲಿನ ಸಿಎಂಸಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ(ಪ್ರೌಢ ಶಾಲಾ ವಿಭಾಗ) ಹಿರಿಯ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜ್ಞಾನ ತಂತ್ರಜ್ಞಾನ ಮುಂದುವರಿದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮವಂತಾಗಿದೆ. ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರು ಒಟ್ಟುಗೂಡಿ ಗುರುಗಳಿಗೆ ಗೌರವ ವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಶಿಕ್ಷಕರಿಗೆ ಗೌರವ ಸಲ್ಲಿಸುವ ಜತೆಗೆ ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮ ಇದೀಗ ಅಗತ್ಯವಿದೆ ಎಂದರು.
ನಿಕಟಪೂರ್ವ ಮುಖ್ಯಶಿಕ್ಷಕ ಉಮೇಶ್ ಇಟಗಿ ಮಾತನಾಡಿದರು. 2000 ರಿಂದ 2025ರವರೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿದ ನೂರಾರು ಹಿರಿಯ ವಿದ್ಯಾರ್ಥಿಗಳು ಶಿಕ್ಷಕರಾದ ಪಿ.ಶಶಿಕಲಾ, ಎಂ.ನಂಜಪ್ಪ, ಎಂ.ಎಸ್.ಸವಿತಾ, ಬಿ.ವಿಜಯ್, ಸುರೇಶ್ ನಾಯ್ಕ, ಸರಿತಾ, ಶೇಖರಯ್ಯ ಕೋಡಿಮಠ್, ಹೀರಲಾಲ್, ಶಿವಪ್ಪ, ಶ್ರೀಧರ್, ಶ್ರೀಕಾಂತ್, ನಾಗೇಶ್ ಸೇರಿ ಇತರ ಶಿಕ್ಷಕರಿಗೆ ಗುರುವಂನೆ ಸಲ್ಲಿಸಿದರು.
"
ಶಿಕ್ಷಕರು ಶಿಷ್ಯರ ಭವಿಷ್ಯ ರೂಪಿಸುತ್ತಾರೆ, ಜೀವನಕ್ಕೆ ಮಾರ್ಗದರ್ಶಕರಾಗುತ್ತಾರೆ. ಶಿಕ್ಷಕರು ಯಾವುದೇ ಅಪೇಕ್ಷೆಯಿಲ್ಲದೆ ಶಿಷ್ಯರಿಗಾಗಿ ಶ್ರಮಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ಬದುಕು ಹಸನಾಗಲಿ ಎಂದು ಮಾತ್ರ ಬಯಸುತ್ತಾರೆ. ವಿದ್ಯಾರ್ಥಿಗಳು ಸಾಧನೆ ಮಾಡಿ, ಶಿಕ್ಷಕರನ್ನು ಗೌರವಿಸುವುದು ಶಿಕ್ಷಕರ ಜೀವಮಾನದಲ್ಲಿ ಮರೆಯದ ಸಂಗತಿ.