ತಲುಪುವ ಮಾರ್ಗ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಜಂಕ್ಷನ್‌ನಲ್ಲಿಯೇ ಗುಂಜಾನರಸಿಂಹ ಸ್ವಾಮಿಯವರ ದೇವಾಲಯವಿದೆ. ಮೈಸೂರು, ಚಾಮರಾಜನಗರ, ಕೊಳ್ಳೇಗಾಲ ನಂಜನಗೂಡು ಹಾಗೂ ಮಳವಳ್ಳಿ ಕಡೆಯಿಂದ ಸರ್ಕಾರಿ, ಖಾಸಗಿ ಮತ್ತು ಆಟೋಗಳಲ್ಲಿ ಬರಬಹುದಾಗಿದೆ. ದೇವಾಲಯ ಬಳಿಯೇ ಸಾರಿಗೆ ವಾಹನಗಳ ನಿಲುಗಡೆ ಇರುವುದರಿಂದ ಆಸ್ತಿಕರು ದೇವರ ದರ್ಶನವನ್ನು ಪಡೆಯಬಹುದು. ತ್ರಿವೇಣಿ ಸಂಗಮದ ಮಧ್ಯೆಯಿರುವ ಶ್ರೀ ನಡುಹೊಳೆ ಬಸಪ್ಪ, ದಡದಲ್ಲಿರುವ ಶ್ರೀ ಅಗಸ್ತೇಶ್ವರ, ಶ್ರೀ ಭಿಕ್ಷೇಶ್ವರ, ಶ್ರೀ ಮೂಲಸ್ಥಾನೇಶ್ವರ ಹಾಗೂ ಪಕ್ಕದಲ್ಲಿರುವ ಶ್ರೀ ಬಳ್ಳೇಶ್ವರ ದೇವಾಲಯಗಳಿಗೂ ಭೇಟಿ ನೀಡಬಹುದು.