ಸರ್ಕಾರಿ ನೌಕರರ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಅಗತ್ಯ:ಆರ್.ರಮಾ ಅಭಿಮತ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಅಂಶಿ ಪ್ರಸನ್ನಕುಮಾರ್, ಆರ್.ರಮಾ, ಡಾ.ಕೆ.ಲಕ್ಷ್ಮೀ, ಎಲ್.ಐ.ಲಕ್ಕಮ್ಮನವರ್, ಪರ್ವೀನ್ ಬಾನು ಬುಳ್ಳಣ್ಣನವರ್, ಗಣೇಶ್ ನಿಲವಾಗಿಲು, ಆರ್.ಎನ್.ಮಂಜುನಾಥ್, ಟಿ.ಎನ್.ಲೋಕೇಶ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸರ್ಕಾರಿ ನೌಕರರಲ್ಲಿಯೂ ಸಂವೇದನಾಶೀಲ ಕವಿಗಳು, ಲೇಖಕರು, ನಟರು ಇದ್ದಾರೆ. ಅಂಥವರಿಗೆ ಸೂಕ್ತ ಪ್ರೋತ್ಸಾಹ ನೀಡುವುದರ ಜತೆಗೆ ವೇದಿಕೆ ಕಲ್ಪಿಸಬೇಕು
ಸರ್ಕಾರಿ ನೌಕರ ಎಂದರೆ ಕೇವಲ ಕಡತ ವಿಲೇವಾರಿಯಲ್ಲಿ ಮುಳುಗಿರಬೇಕಿಲ್ಲ. ಬಿಡುವಿನ ಸಮಯದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ನಿರತರಾಗಬೇಕು
ಸಾರ್ವಜನಿಕ ಸೇವೆಯ ಜತೆಗೆ ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ
ಮೈಸೂರು:ಸರ್ಕಾರಿ ನೌಕರರಲ್ಲಿಯೂ ಸಂವೇದನಾಶೀಲ ಕವಿಗಳು, ಲೇಖಕರು, ನಟರು ಇದ್ದಾರೆ. ಅಂಥವರಿಗೆ ಸೂಕ್ತ ಪ್ರೋತ್ಸಾಹ ನೀಡುವುದರ ಜತೆಗೆ ವೇದಿಕೆ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಸಾಹಿತ್ಯ ಪರಿಷತ್ತು ಸಂಸ್ಥಾಪಕ ಅಧ್ಯಕ್ಷೆ ಆರ್.ರಮಾ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ನೌಕರ ಎಂದರೆ ಕೇವಲ ಕಡತ ವಿಲೇವಾರಿಯಲ್ಲಿ ಮುಳುಗಿರಬೇಕಿಲ್ಲ. ಬಿಡುವಿನ ಸಮಯದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ನಿರತರಾಗಬೇಕು. ಸಾರ್ವಜನಿಕ ಸೇವೆಯ ಜತೆಗೆ ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.
ಕೆಲವರಿಗೆ ವೃತ್ತಿಯ ಜತೆಗೆ ಪ್ರವೃತ್ತಿಯೂ ಇರುತ್ತದೆ. ಆದರೆ ವೃತ್ತಿಯಿಂದ ನಿವೃತ್ತಿಯ ನಂತರ ಪ್ರವೃತ್ತಿಯ ಕಡೆ ಗಮನಹರಿಸುತ್ತಾರೆ. ಸರ್ಕಾರಿ ನೌಕರರಲ್ಲಿಯೂ ಸಂವೇದನಾಶೀಲ ಕವಿಗಳು, ಲೇಖಕರು, ನಟರು ಇದ್ದಾರೆ. ಅಂಥವರಿಗೆ ಸೂಕ್ತ ಪ್ರೋತ್ಸಾಹ ನೀಡುವುದರ ಜತೆಗೆ ವೇದಿಕೆ ಕಲ್ಪಿಸಿಕೊಡಬೇಕು. ಆ ಕೆಲಸವನ್ನು ಪರಿಷತ್ತು ಆರಂಭಿಸಿದೆ ಎಂದು ಹೇಳಿದರು.
ಸರ್ಕಾರಿ ನೌಕರರರು ಕನ್ನಡನಾಡು-ನುಡಿಯ ವಿಷಯದಲ್ಲಿ ಕೂಡ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಾರೆ. ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನದಲ್ಲಿಯೂ ಪ್ರಮಖ ಪಾತ್ರ ವಹಿಸುತ್ತಾರೆ. ಹೀಗಾಗಿ ಪರಿಷತ್ತು ವತಿಯಿಂದ ಕವಿಗೋಷ್ಠಿ, ಜಾನಪದ ಕಾರ್ಯಕ್ರಮಗಳು, ನಾಟಕ, ಚಿತ್ರಕಲಾ ಪ್ರದರ್ಶನ ಮತ್ತಿತರ ಸೃಜನಶೀಲ ಕಾರ್ಯಕ್ರಮಗಳನ್ನು ಸಂಘಟಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ಕೆ. ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗೌರವಾಧ್ಯಕ್ಷ ಎಲ್.ಐ.ಲಕ್ಕಮ್ಮನವರ್, ಸಂಸ್ಥಾಪಕ ರಾಜ್ಯ ಪ್ರಧಾನ ಕಾರ್ಯದರ್ಶಿ ಪರ್ವೀನ್ ಬಾನು ಬುಳ್ಳಣ್ಣನವರ್, ರಾಜ್ಯ ಉಪಾಧ್ಯಕ್ಷ ಗಣೇಶ್ ನಿಲವಾಗಿಲು, ಮೈಸೂರು ವಿಭಾಗೀಯ ಕಾರ್ಯದರ್ಶಿ ಆರ್.ಎನ್.ಮಂಜುನಾಥ್, ಪರಿಷತ್ತು ಜಿಲ್ಲಾ ಘಟಕದ ಗೌರವಾಧ್ಯಕ್ಷ ಟಿ.ಎನ್. ಲೋಕೇಶ್, ಉಪಾಧ್ಯಕ್ಷ ಪಿ.ರಾಘವೇಂದ್ರ ಇತರರು ಇದ್ದರು.
ಉದ್ಘಾಟನೆ, ಪ್ರಮಾಣಪತ್ರ ವಿತರಣೆ ಬಳಿಕ ಸಂಗೀತ, ನೃತ್ಯ, ಗಾಯನ, ಕಾವ್ಯವಾಚನ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.