ಮೈಸೂರಿನಲ್ಲಿ ಉತ್ತಮ ಮಳೆ

ಮಳೆಯ ಸಾಂದರ್ಭಿಕ ಚಿತ್ರ
ಮಳೆಯ ಸಾಂದರ್ಭಿಕ ಚಿತ್ರ
Published on
ಮೈಸೂರು: ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಮಂಗಳವಾರ ಸಂಜೆ ದಿಢೀರಾಗಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಉತ್ತಮ ಮಳೆ ಸುರಿಯಿತು.
ನಗರದಲ್ಲಿ ಜ.1 ರಂದು ವರ್ಷದ ಮೊದಲ ಮಳೆ ಸುರಿಯಿತು. ಅದಾದ ನಂತರ ಕೆಲವು ದಿನಗಳು ಮೋಡ ಕವಿದ ವಾತಾವರಣ ಕಾಣಿಸಿಕೊಂಡರೂ ಮಳೆ ಸುರಿಯಲಿಲ್ಲ. ಮಂಗಳವಾರ ಸಂಜೆ 5.20 ರಿಂದ 5.35ರವರೆಗೆ ಉತ್ತಮ ಮಳೆ ಸುರಿಯಿತು. ದಿಢೀರಾಗಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ಹಗುರ ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಜ.7 ರಿಂದ 11ರವರೆಗೆ ಮೋಡ ಕವಿದ ವಾತಾವರಣ ಕಾಣಿಸಿ ೊಂಡು ಹಗುರವಾದ ಮ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಎನ್. ಉಮಾಶಂಕರ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜ.7 ರಿಂದ 11ರ ಅವಧಿಯಲ್ಲಿ ಕನಿಷ್ಠ 11 ರಿಂದ 12, ಗರಿಷ್ಠ 30 ರಿಂದ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗಾಳಿಯು ಗಂಟೆಗೆ 4 ರಿಂದ 6 ಕಿ.ಮೀ. ವೇಗದಲ್ಲಿ ಬೀಸಲಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net