ಮೈಸೂರಿನ ಆದಿನಾಥ ಜಿನಾಲಯ ದೇವಸ್ಥಾನದಲ್ಲಿ 6 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ನಗರದ ಎಂ.ಎಂ. ರಸ್ತೆಯ ಆದೀಶ್ವರ ವಾಟಿಕ ಅಪಾರ್ಟ್‌ಮೆಂಟ್‌ನಲ್ಲಿರುವ ಆದಿನಾಥ ಜಿನಾಲಯ ದೇವಸ್ಥಾನದ ಬಾಗಿಲು ಮುರಿದು 6 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ಕಳವು ಮಾಡಲಾಗಿದೆ.
ದೇವಾಲಯದಲ್ಲಿ ಪೂಜೆ ಸಲ್ಲಿಸಲು ಎಂದಿನಂತೆ ಗುರುವಾರ ಪೂಜಾರಿ ಮಹೇಶ್ ಆಗಮಿಸಿದಾಗ ದೇವಸ್ಥಾನದ ಬಾಗಿಲನ್ನು ಕಳ್ಳರು ಮೀಟಿ ದೇವಸ್ಥಾನದ ಒಳಗೆ ಇದ್ದ ದೇವರ ವಿಗ್ರಹದ ಹಣೆಗೆ ಸುತ್ತಿರುವ ಚಿನ್ನದ ಹಣೆಪಟ್ಟಿ (ಭಾಲಪಟ್ಟಿ)ಯನ್ನು ಕಳವು ಮಾಡಿದ್ದಾರೆ. ಇದು ಸುಮಾರು 70 ರಿಂದ 80 ಗ್ರಾಂ ತೂಕ ಹೊಂದಿದ್ದು, 6 ಲಕ್ಷ ರೂ. ಮೌಲ್ಯ ಹೊಂದಿದೆ. ದೇವಸ್ಥಾನದಲ್ಲಿದ್ದ 10 ಸಾವಿರ ರೂ. ನಗದು ಹಾಗೂ ಚಿಲ್ಲರೆ ಹಣವನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ಶ್ರೀ ಆದಿನಾಥ ಜಿನಾಗ್ಯ ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರವೀಣ್ ಜೈನ್ ನೀಡಿದ ದೂರಿನ ಮೇರೆಗೆ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net