ಸಂತ ಜೋಸೆಫರ ಶಾಲೆ ಸಾಧನೆ: ಸಂತ ಜೋಸೆಫರ ಪಿಯು ಕಾಲೇಜು ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಟಾಪರ್ ವಿದ್ಯಾರ್ಥಿಯನ್ನು ಹೊಂದುವ ಮೂಲಕ ಸಂಭ್ರಮಿಸಿತು. ವಿದ್ಯಾರ್ಥಿನಿ ಎಚ್.ಎಂ.ಮಾನ್ಯಾ ಕಲಾ ವಿಭಾಗದಲ್ಲಿ 587 ಅಂಕ ಗಳಿಸುವ ಮೂಲಕ ತಾಲೂಕಿಗೆ ದ್ವಿತೀಯ ಟಾಪರ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿ ಅಲ್ಪಿನಾ 586 ಅಂಕಗಳಿಸಿದ್ದಾರೆ. ಒಟ್ಟು 104 ಅತ್ಯುನ್ನತ ಶ್ರೇಣಿ, 213 ಉನ್ನತ ಶ್ರೇಣಿ ಪಡೆದಿದ್ದು, ಅರ್ಥಶಾಸ್ತ್ರ ವಿಷಯದಲ್ಲಿ 10 ವಿದ್ಯಾರ್ಥಿಗಳು, ಕನ್ನಡದಲ್ಲಿ 7 ವಿದ್ಯಾರ್ಥಿಗಳು , ರಾಜ್ಯಶಾಸ್ತ್ರ 4 ವಿದ್ಯಾರ್ಥಿಗಳು , ಭೂಗೋಳಶಾಸ್ತ್ರದಲ್ಲಿ 4 ವಿದ್ಯಾರ್ಥಿಗಳು, ವ್ಯವಹಾರ ಅಧ್ಯಯನ 4 ವಿದ್ಯಾರ್ಥಿಗಳು, ಇತಿಹಾಸ 2 ವಿದ್ಯಾರ್ಥಿಗಳು, ಲೆಕ್ಕಶಾಸ್ತ್ರ 1 ವಿದ್ಯಾರ್ಥಿ, ಭೌತಶಾಸ್ತ್ರ 1 ವಿದ್ಯಾರ್ಥಿಯು 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲೆ ಅನಿತಾ ಇ ಡಯಾಸ್ ಮತ್ತು ಪ್ರಾಧ್ಯಾಪಕ ವೃಂದ ಅಭಿನಂದಿಸಿದೆ.