ಗಾಂಧೀಜಿಯನ್ನು ಯುವಜನರಿಗೆ ಮರು ಪರಿಚಯಿಸಬೇಕಾಗಿದೆ

ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಕಾರ್ಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಹೇಮಚಂದ್ರ, ಪ್ರೊ.ಬಿ.ವಿ.ವಸಂತಕುಮಾರ್, ರಮೇಶ್, ಡಾ.ರಾಶಿ, ಸುಜನ್ ಕುಮಾರ್, ಪ್ರವೀಣ್ ಎಂ.ಬಿದರಕುಂದಿ ಇತರರಿದ್ದರು.
ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಕಾರ್ಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಹೇಮಚಂದ್ರ, ಪ್ರೊ.ಬಿ.ವಿ.ವಸಂತಕುಮಾರ್, ರಮೇಶ್, ಡಾ.ರಾಶಿ, ಸುಜನ್ ಕುಮಾರ್, ಪ್ರವೀಣ್ ಎಂ.ಬಿದರಕುಂದಿ ಇತರರಿದ್ದರು.
Published on
ಹುಣಸೂರು : ರಾಷ್ಟ್ರಪಿತ ಗಾಂಧೀಜಿಯನ್ನು ಇಂದಿನ ಯುವಜನರಿಗೆ ಮರುಪರಿಚಯಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಎನ್.ಹೇಮಚಂದ್ರ ಅಭಿಪ್ರಾಯಪಟ್ಟರು.
ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಶುಕ್ರವಾರ ಗಾಂಧಿ ಅಧ್ಯಯನ ಸಮಿತಿ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ‘ಗಾಂಧಿ ಜೀವನ ಚರಿತ್ರೆ-ರಸಪ್ರಶ್ನೆ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿ ಭಾವಚಿತ್ರ ಹೊರತುಪಡಿಸಿ ಬೇರೆ ಏನೂ ಬಹುತೇಕ ಯುವಜನರಿಗೆ ತಿಳಿದಿಲ್ಲ.
ದೇಶದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಗಾಂಧೀಜಿ ಜೀವನಚರಿತ್ರೆ, ಅವರು ಕೈಗೊಂಡಿದ್ದ ಉಪವಾಸ ಮತ್ತು ಸತ್ಯಾಗ್ರಹದ ಮಹತ್ವ, ಅಹಿಂಸಾತ್ಮಕ ಹೋರಾಟಗಳ ಬಗ್ಗೆ ತಿಳಿಯಬೇಕಿದೆ. ಮಹಾತ್ಮನ ಜೀವನಾದರ್ಶಗಳನ್ನು ತಿಳಿಸಲು ರಸಪ್ರಶ್ನೆಯು ಸಣ್ಣ ಪ್ರಯತ್ನವಾಗಿದೆ ಎಂದರು.
ಕನ್ನಡ ಭಾಷಾ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಬಿ.ವಿ.ವಸಂತಕುಮಾರ್ ಮಾತನಾಡಿ, ಗಾಂಧಿ ಎಂಬುದೊಂದು ಶಕ್ತಿ. ಅದನ್ನು ಅರ್ಥಮಾಡಿಕೊಳ್ಳುವ ಮನಸ್ಥಿತಿ ನಮಗಿರಬೇಕು ಎಂದರು. ದಕ್ಷಿಣ ಆಫ್ರಿಕಾದಲ್ಲಿ ಆದ ಒಂದು ಅಪಮಾನ ಗಾಂಧೀಜಿಯನ್ನು ಮಹಾತ್ಮನಸ್ಥಾನಕ್ಕೆ ಕೊಂಡೊಯ್ಯಿತು. ಜೀವನದುದ್ದಕ್ಕೂ ಹಲವು ಬಾರಿ ಅಪಮಾನ ಎದುರಿಸುವ ನಮಗೆ
ದೇಶದ ಸ್ವಾತಂತ್ರ್ಯ, ಇತಿಹಾಸ ಮತ್ತು ಪರಂಪರೆ ಬಗ್ಗೆ ಗೌರವವಾದರೂ ಮೂಡಬೇಕು ಎಂದರು.
ಪ್ರಾಂಶುಪಾಲ ಡಾ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಮತ್ತು ಗಾಂಧಿ ಅಧ್ಯಯನ ಸಮಿತಿ ಸಂಚಾಲಕಿ ಡಾ.ಎಂ.ಆರ್.ರಾಶಿ, ಐಕ್ಯೂಎಸಿ ಸಂಚಾಲಕ ಡಾ.ಬಸವರಾಜ, ತೀರ್ಪುಗಾರರಾದ ಡಿ.ಸುಜನ್‌ಕುಮಾರ್, ಪ್ರವೀಣ್ ಬಿದರಕುಂದಿ, ಅಧ್ಯಾಪಕರಾದ ರಮೇಶ್ ಹರ್ಷವರ್ಧನ್, ಪ್ರಕಾಶ್, ಮಂಜು, ಮಹೇಶ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವಿನಯ್ ಮತ್ತು ತಂಡ ಪ್ರಥಮ:
ರಸಪ್ರಶ್ನೆ ಸ್ಪರ್ಧೆಯಲ್ಲಿ ಕೆ.ವಿನಯ್ ಮತ್ತು ತಂಡ ಪ್ರಥಮ, ಕೀರ್ತನಾ ಮತ್ತು ತಂಡ ದ್ವಿತೀಯ,
ಕೆ.ಎಂ.ಸುನಿಲ್ ಕುಮಾರ್ ಮತ್ತು ತಂಡ ತೃತೀಯಸ್ಥಾನ ಗಳಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net