ಎಸ್‌ವಿಆರ್ ನಗರದ ನಿವಾಸಿ ಪಿ. ಜೀವನ್ ಎಂಬವರೇ ವಂಚನೆಗೆ ಒಳಗಾದವರು. ಜೀವನ್ ಅವರು ಹೆಬ್ಬಾಳ್ ನಿವಾಸಿ ಪಿ.ಎಸ್. ಪುರುಷೋತ್ತಮ್ ಮಾತು ನಂಬಿ ಜ.13 ರಂದು 11,000 ರೂ.ಗಳನ್ನು ಪುರುಷೋತ್ತಮ್ ನೀಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದರು. ನಂತರ ಯಾವಾಗ ಲಾಭಾಂಶ ಬರುತ್ತದೆ ಎಂದು ಕೇಳಿದಾಗ ನೀನು ಹಣ ಹಾಕುತ್ತಾ ಬಂದರೆ ಒಟ್ಟಿಗೆ ಲಕ್ಷಾಂತರ ರೂ. ಬರುತ್ತದೆ ಎಂದು ನಂಬಿಸಿದ. ಆತನ ಮಾತು ನಂಬಿ ಜ.13 ರಿಂದ ಮಾ.31ರವರೆಗೆ ಒಟ್ಟು 20.31 ಲಕ್ಷ ರೂ.ಗಳನ್ನು ಆತ ಹೇಳಿದ ಖಾತೆಗೆ ವರ್ಗಾಯಿಸಿದರು.