ಉಚಿತ ಕ್ರಾೃಶ್ ಕೋರ್ಸ್ ತರಬೇತಿ

 training
training
Published on

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ಸಮೂಹ ವಿದ್ಯಾಸಂಸ್ಥೆಯಿಂದ ಯೋಜನೆ
ಮೈಸೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಡಾ.ಚಂದ್ರಶೇಖರ್ ಫೌಂಡೇಷನ್ ಹಾಗೂ ಕಾವೇರಿ ಸಮೂಹ ವಿದ್ಯಾಸಂಸ್ಥೆಗಳ ಅಂಗ ಸಂಸ್ಥೆಯಾದ ಕಾವೇರಿ ಎಕ್ಸಲೆನ್ಸ್ ಪಿಯು ಕಾಲೇಜು ವತಿಯಿಂದ 2026ನೇ ಸಾಲಿನ ನೀಟ್ ಮರು ಪರೀಕ್ಷೆಗಾಗಿ ಉಚಿತ ಪರಿಷ್ಕರಣೆ ಮತ್ತು ಕ್ರಾೃಶ್ ಕೋರ್ಸ್ ಹಮ್ಮಿಕೊಳ್ಳಲಾಗಿದೆ.
ನೀಟ್ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲು ನುರಿತ ತಜ್ಞ ಉಪಾನ್ಯಸಕರಿಂದ ವಿಶೇಷ ಉಚಿತ ಕ್ರಾೃಶ್ ಕೋರ್ಸ್ ತರಬೇತಿ ನೀಡಲಾಗುತ್ತಿದೆ.
ದೇವೇಗೌಡ ಸರ್ಕಲ್ ಹತ್ತಿರದ ಕಾವೇರಿ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಮೇ 18ರಿಂದ ಆರಂಭವಾಗುವ ಈ ಕೋರ್ಸ್ ನೀಟ್ ಪರೀಕ್ಷೆವರೆಗೆ ಬೆಳಗ್ಗೆ 9 ರಿಂದ 4 ಗಂಟೆವರೆಗೆ ನಡೆಯಲಿದೆ. ಕೋರ್ಸ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಾರ್ಡಿಂಜ್ ಸರ್ಕಲ್‌ನಿಂದ ನಿತ್ಯ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಾವೇರಿ ಸಮೂಹ ವಿದ್ಯಾಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net