ಹೂಡಿಕೆ ಹೆಸರಿನಲ್ಲಿ 14.39 ಲಕ್ಷ ರೂ. ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ಹೂಡಿಕೆ ಮಾಡಿ ಹಣ ಗಳಿಸಲು ಮುಂದಾದ ವ್ಯಕ್ತಿಯೊಬ್ಬರು ವಂಚಕರ ಜಾಲಕ್ಕೆ ಸಿಲುಕಿ 14.39 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ವಿಜಯನಗರ 3ನೇ ಹಂತದ ನಿವಾಸಿ ಕೆ.ಆರ್. ಹರ್ಷ ಎಂಬವರೇ ಹಣ ಕಳೆದುಕೊಂಡವರು. ಇವರಿಗೆ ಸ್ನೇಹಿತರೊಬ್ಬರು ಹೂಡಿಕೆ ಮಾಡಲು ವಾಟ್ಸ್‌ಆ್ಯಪ್ ಮೂಲಕ ಲಿಂಕ್‌ವೊಂದನ್ನು ಕಳುಹಿಸುತ್ತಾರೆ. ನಂತರ ಹೂಡಿಕೆ ಮಾಡುವ ಸಲುವಾಗಿ ಹಣ ವರ್ಗಾಹಿಸಬೇಕಾದ ಬ್ಯಾಂಕ್ ಖಾತೆ ಮತ್ತು ಫೋನ್ ಪೇ ಮೊಬೈಲ್ ನಂಬರ್ ವಿವರವನ್ನು ಹಂಚಿಕೊಂಡರು. ಬಳಿಕ ಒಟ್ಟು 14.39 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರು.
ಕೆಲವು ದಿನಗಳ ನಂತರ ಹಣ ಹಿಂಪಡೆಯಲು ಯತ್ನಿಸಿದಾಗ ವಿತ್‌ಡ್ರಾ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೆ, ಹೂಡಿಕೆಯ ಲಾಗಿನ್ ಅನ್ನು ವಂಚಕರು ಬ್ಲಾಕ್ ಮಾಡಿದ್ದರು. ಈ ಸಂದರ್ಭ ಹರ್ಷ ಅವರ ಬ್ಯಾಂಕ್ ಖಾತೆ ಲೀನ್ ಆಗಿರುವುದು ಕಂಡು ಬಂತು. ಹರ್ಷ ಅವರ ಖಾತೆಯನ್ನು ಬಳಸಿಕೊಂಡ ವಂಚಕರು ಬೇರೆ ವ್ಯಕ್ತಿಗಳಿಗೆ ಸೈಬರ್ ಕ್ರೈಂ ವಂಚನೆ ಮಾಡಿದ ಮೋಸದ ಹಣ ವರ್ಗಾವಣೆ ಮಾಡಿರುವುದು ಕಂಡುಬಂತು. ಈ ಕುರಿತು ಬುಧವಾರ ಸೆನ್ ಪೊಲೀಸ್ ಠಾಣೆಗೆ ಹರ್ಷ ದೂರು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net