ವ್ಯಾಟ್ಸ್ ಆ್ಯಪ್ ಖಾತೆಯನ್ನು ಹ್ಯಾಕ್ ಮಾಡಿ, ಕ್ರೆಡಿಟ್ ಕಾರ್ಡ್‌ನಿಂದ 91 ಸಾವಿರ ರೂ. ದೋಚಲಾಗಿದೆ. ಗಾಯತ್ರಿಪುರಂ ನಿವಾಸಿಯೊಬ್ಬರ ಮೊಬೈಲ್‌ಗೆ ವ್ಯಾಟ್ಸ್‌ಆ್ಯಪ್ ವೆರಿಫೈ ಎಂಬ ಸಂದೇಶ ಬಂದಿದೆ. ಬಳಿಕ ಒಮ್ಮೆಯೂ ಬಳಕೆ ಮಾಡದ ಕ್ರೆಡಿಟ್ ಕಾರ್ಡ್‌ನಿಂದ ಹಣ ಕಡಿತಗೊಂಡಿದೆ. ಅನುಮಾನಗೊಂಡ ಅವರು, ಆ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಯಾವ ರೀತಿ ಹಣ ದೋಚಲಾಗಿದೆ ಎಂಬ ಮಾಹಿತಿಯೇ ಹಣ ಕಳೆದುಕೊಂಡವರಿಗೆ ಗೊತ್ತಾಗುತ್ತಿಲ್ಲ. ಈ ಬಗ್ಗೆ ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.