ರಾಜಸ್ಥಾನ ಮೂಲದ ಮೋಹನ್‌ಲಾಲ್ ಇಲ್ಲಿ ಆಭರಣ ಮಳಿಗೆ ತೆರೆದು, ವ್ಯವಹಾರ ನಡೆಸುತ್ತಿದ್ದ. ಚಿನ್ನ ನೀಡುವುದಾಗಿ ನಂಬಿಸಿ ಗ್ರಾಹಕರಿಂದ 15 ತಿಂಗಳು ಹಣ ಕೊಟ್ಟಿಸಿದ್ದ. ಜತೆಗೆ, ಮಳಿಗೆಯಿಂದ ಎರಡು ತಿಂಗಳ ಹಣ ಸೇರಿಸಿ ಚಿನ್ನಾಭರಣ ನೀಡುವುದಾಗಿ ಭರವಸೆ ನೀಡಿದ್ದ. ಆರಂಭದಲ್ಲಿ ಸುಸೂತ್ರವಾಗಿ ನಡೆದಿತ್ತು. ಹೀಗಾಗಿ, ಎರಡು ಬಾರಿ ಇದೇ ಮಾದರಿಯಲ್ಲಿ ಗ್ರಾಹಕರಿಗೆ ಹಣ ಕಟ್ಟಿಸಿಕೊಂಡು ಚಿನ್ನಾಭರಣ ಕೊಟ್ಟಿದ್ದಾನೆ.