ಅಡವಿಟ್ಟ ಚಿನ್ನಾಭರಣವನ್ನು ಬಿಡಿಸಲು ಹಣ ಪಡೆದ ಪೊಲೀಸ್ ಕಾನ್‌ಸ್ಟೇಬಲ್ ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಎನ್.ಆರ್.ಸಂಚಾರ ಠಾಣೆಯ ಗಸ್ತು ವಾಹನ ಚಾಲಕ, ಸಿಎಆರ್‌ನ ಕಾನ್‌ಸ್ಟೇಬಲ್ ಬಿ.ವಿ.ಮಹದೇವ ವಿರುದ್ಧ ಕಲ್ಯಾಣಗಿರಿಯ ನಿವಾಸಿಯೂ ಆದ ಉದ್ಯಮಿ ರಾಜೇಶ್ ದೂರು ನೀಡಿದ್ದು, ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.