ಅಂದಾಜು 500 ಮರಗಳನ್ನು ಗುರುತಿಸಿರುವುದರಿಂದ ನಮಗೂ ಕೂಡ ಆತಂಕ ಎದುರಾಗಿತ್ತು. ಆದರೆ, ಎಲ್ಲ ಮರಗಳನ್ನು ಸ್ಥಳಾಂತರ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಯು ವರದಿ ನೀಡಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಇದು 712 ಕೋಟಿ ರೂ. ಯೋಜನೆಯಾಗಿದ್ದು, ಇದರಲ್ಲಿ 120 ಕೋಟಿ ರೂ. ಫ್ಲೈ ಓವರ್ ನಿರ್ಮಾಣವಾಗಲಿದೆ ಎಂದು ಸಂಸದರು ತಿಳಿಸಿದರು.