ರಾಜಕೀಯ ಒತ್ತಡವನ್ನು ಮೀರಿ ಪಾಲಿಕೆ ಅಧಿಕಾರಿಗಳು ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು. ಇದು ಪುನರಾವರ್ತನೆಯಾಗದಂತೆ ನಿಯಮಿತವಾಗಿ ಪರಿಶೀಲನೆ ಮಾಡಬೇಕು. ಜತೆಗೆ, ಇದನ್ನು ಅಳವಡಿಸುವ ವ್ಯಕ್ತಿಗಳು, ಸಂಘಟನೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಬಿಸಿ ಮುಟ್ಟಿಸಬೇಕಿದೆ. ಆಗಲೇ ಇದಕ್ಕೆ ಕಡಿವಾಣ ಹಾಕಲು ಸಾಧ್ಯ. ಇಲ್ಲವಾದರೆ, ಅದೇ ರಾಗ, ಅದೇ ಹಾಡು.. ಎಂಬಂತಾಗಲಿದೆ. ಈ ಸಮಸ್ಯೆ ಕುರಿತು ಜನರಿಂದ ಸಂಗ್ರಹಿಸಿರುವ ಜನಾಭಿಪ್ರಾಯ ಇಲ್ಲಿದೆ.