ವಿನಾಯಕನಗರ ನಿವಾಸಿಗಳಾದ ಪಿ.ಎಸ್.ಕೃಷ್ಣ, ಅಮರ್‌ನಾಥ್, ಎಸ್.ಹರೀಶ್, ಸಚಿನ್, ಮದನ್ ಬಂಧಿತ ಆರೋಪಿಗಳು. ನರಸಿಂಹರಾಜ ಉಪವಿಭಾಗದ ಎಸಿಪಿ ಮಾಥ್ಯೂ ಥಾಮಸ್ ಅವರು ಭಾನುವಾರ ರಾತ್ರಿ ತಮ್ಮ ತಂಡದೊಂದಿಗೆ ಗಸ್ತಿಗೆ ತೆರಳಿದ್ದು, ಮುಂಜಾನೆ 3.30ಕ್ಕೆ ಮೆಟ್ರೊ ಪೊಲೀಸ್ ಅಪಾರ್ಟ್‌ಮೆಂಟ್ ಬಳಿ ಐವರು ಓಡಾಡುತ್ತಿರುವುದು ಕಂಡುಬಂದಿತ್ತು.