ರಾವಂದೂರು ತಂಡಕ್ಕೆ ಪ್ರಥಮ ಸ್ಥಾನ

 ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ಬಸವೇಶ್ವರ ಕ್ರೀಡಾ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಡಾಕ್ಟರ್ ವಿಷ್ಣುವರ್ಧನ್ ಗೋಲ್ಡನ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ರಾವಂದೂರು ಬಸವೇಶ್ವರ ಕ್ರೀಡಾ ಸಂಸ್ಥೆಯ ಕ್ರೀಡಾಪಟುಗಳು.
ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ಬಸವೇಶ್ವರ ಕ್ರೀಡಾ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಡಾಕ್ಟರ್ ವಿಷ್ಣುವರ್ಧನ್ ಗೋಲ್ಡನ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ರಾವಂದೂರು ಬಸವೇಶ್ವರ ಕ್ರೀಡಾ ಸಂಸ್ಥೆಯ ಕ್ರೀಡಾಪಟುಗಳು.
Published on

ಪ್ರಮುಖ ಮುಖ್ಯಾಂಶಗಳು

  • ವಿಷ್ಣು ಗೋಲ್ಡನ್ ಕಪ್ ಕ್ರಿಕೆಟ್
ರಾವಂದೂರು: ಬಸವೇಶ್ವರ ಕ್ರೀಡಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ 18ನೇ ವರ್ಷದ ವಿಷ್ಣು ಗೋಲ್ಡನ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆತಿಥೇಯ ರಾವಂದೂರು ತಂಡ ಪ್ರಥಮ ಸ್ಥಾನ ಗಳಿಸಿತು.
ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಾಲ್ಕು ದಿನಗಳ ಟೂರ್ನಿ ಆಯೋಜಿಸಲಾಗಿತ್ತು. ಪಿರಿಯಾಪಟ್ಟನ ಮಸಣಿಕಮ್ಮ ತಂಡ ದ್ವೀತಿಯ ಹಾಗೂ ಸಿ.ಕೆ.ಹಳ್ಳಿ ತಂಡ ತೃತೀಯ ಸ್ಥಾನ ಪಡೆಯಿತು. ಟೂರ್ನಿಯಲ್ಲಿ ಒಟ್ಟು 30 ತಂಡಗಳು ಭಾಗವಹಿಸಿದ್ದವು.
ಕಾಂಗ್ರೆಸ್ ಮುಖಂಡ ಡಿ.ಎಸ್ .ನಂದೀಶ್ ಮಾತನಾಡಿ, ಗ್ರಾಮೀಣ ಯುವಕರು ಕ್ರೀಡೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಅದರಲ್ಲೂ ಕ್ರಿಕೆಟ್ ಆಟಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ. ಅದೇ ರೀತಿ ಉಳಿದ ಕ್ರೀಡೆಗಳಿಗೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ನಮ್ಮ ಗ್ರಾಮೀಣ ಕ್ರೀಡೆಗಳು ನಶಿಸಿಹೋಗದಂತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಗ್ರಾ.ಪಂ.ಅಧ್ಯಕ್ಷೆ ಸುಜಾತ ವಾಸು, ಡಾ. ಶಂಕರ್, ಮೆಡಿಕಲ್ ಮಂಜು, ವಿಎಸ್‌ಎಸ್‌ಎನ್ ಸದಸ್ಯ ಬಸವಣ್ಣ, ಅಭಿ ಆರಾಧ್ಯ, ಬಸವೇಶ್ವರ ಕ್ರೀಡಾ ಸಂಸ್ಥೆಯ ಸದಸ್ಯರಾದ ಪ್ರವೀಣ್, ಮಿಥುನ್, ಶಿವಕುಮಾರ್, ಚಿರು, ಯಶ್ವಂತ್, ಪವನ್, ಶ್ರವಣ್, ದೀಕ್ಷಿತ್, ಅನು , ರಾಜ್, ಆನಂದ್, ಕಿರಣ್, ಶಿವನ್ ಇತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net