ರೈತರನ್ನು ಒಕ್ಕಲೆಬ್ಬಿಸಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಈ ಬಗ್ಗೆ ಚರ್ಚಿಸಲು ಮೇ 18 ರಂದು ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟ- ಕರ್ನಾಟಕದ ಕೋರ್ ಸಮಿತಿ ಸಭೆ ನಡೆಯಲಿದ್ದು, ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು. ಬಿಡದಿ ಜಮೀನಿಗೆ ವರ್ಷಪೂರ್ತಿ ನೀರಾವರಿ ಸೌಲಭ್ಯವಿದೆ. ಇಲ್ಲಿ ತೆಂಗು, ಅಡಕೆ, ಮಾವು ಸೇರಿದಂತೆ ಇನ್ನಿತರೆ ತೋಟಗಾರಿಕೆ ಬೆಳೆಗಳಿವೆ. ಇಲ್ಲಿಂದಲೇ ಬೆಂಗಳೂರು ನಗರಕ್ಕೆ ತರಕಾರಿ, ಹಣ್ಣು, ಹೈನುಗಾರಿಕೆ ಉತ್ಪನ್ನಗಳಾದ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಸರಬರಾಜಾಗುತ್ತಿದೆ. ಹೀಗಾಗಿ ಭೂ ಸ್ವಾಧೀನ ವಿರೋಧಿಸಿ ಕಳೆದ 438 ದಿನಗಳಿಂದಲೂ ರೈತರು ಬೈರಮಂಗಲದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದಾರೆ. ಆದರೂ ಸರ್ಕಾರ ರಿಯಲ್ ಎಸ್ಟೇಟ್ ದಂಧೆಗೆ ಮಣಿದು ಇದನ್ನು ನಿರ್ಲಕ್ಷಿಸಿದೆ ಎಂದು ಕಿಡಿಕಾರಿದರು.