ಮೈಸೂರು ಮೃಗಾಲಯದಲ್ಲಿ ಹೆಣ್ಣು ಹುಲಿ ಸಾವು

 ಮೈಸೂರು ಮೃಗಾಲಯದಲ್ಲಿ ಇದ್ದ ತಾಯಮ್ಮ ಹೆಸರಿನ ಹೆಣ್ಣು ಹುಲಿ
ಮೈಸೂರು ಮೃಗಾಲಯದಲ್ಲಿ ಇದ್ದ ತಾಯಮ್ಮ ಹೆಸರಿನ ಹೆಣ್ಣು ಹುಲಿ
Published on
ಮೈಸೂರು: ಬಂಡೀಪುರ ಅರಣ್ಯದಿಂದ ನಾಲ್ಕು ವರ್ಷಗಳ ಹಿಂದೆ ರಕ್ಷಿಸಿ ಮೈಸೂರು ಮೃಗಾಲಯಕ್ಕೆ ತರಲಾಗಿದ್ದ ‘ತಾಯಮ್ಮ’ ಹೆಸರಿನ ಹೆಣ್ಣು ಹುಲಿ ಬುಧವಾರ ಮೃತಪಟ್ಟಿದೆ.
ಈ ಹುಲಿಯನ್ನು 28-3-2021 ರಂದು ಮೈಸೂರು ಮೃಗಾಲಯಕ್ಕೆ ತರಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಮ್ಮ ಹುಲಿಯು ಇತ್ತೀಚೆಗೆ ಆಹಾರವನ್ನು ತ್ಯಜಿಸಿತ್ತು. ಚಿಕಿತ್ಸೆಯ ನಡುವೆಯೂ ಹುಲಿಯ ಸ್ಥಿತಿಯು ಗಂಭೀರ ಸ್ವರೂಪಕ್ಕೆ ತಿರುಗಿ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರಲಿಲ್ಲ.
ಮೈಸೂರು ಮೃಗಾಲಯದ ಪಶುವೈದ್ಯ ತಂಡವು ಹೆಚ್ಚಿನ ಪ್ರಯತ್ನದೊಂದಿಗೆ ಆರೈಕೆ ಮಾಡಿದಾಗ್ಯೂ ಸುಮಾರು 10 ದಿನಗಳಿಂದ ಹುಲಿಯು ಆಹಾರ, ನೀರು ಸೇವಿಸದೆ ಇದ್ದ ಹಿನ್ನೆಲೆಯಲ್ಲಿ ಮೃತಪಟ್ಟಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net