ಭಾರತದಲ್ಲಿ ಕೃಷಿ ಕ್ಷೇತ್ರವು ಇತಿಹಾಸದಲ್ಲೇ ಅತ್ಯಂತ ಗಂಭೀರ ಸಂಕಷ್ಟದ ಹಂತವನ್ನು ಎದುರಿಸುತ್ತಿದ್ದು, ಇದರ ಪರಿಣಾಮವಾಗಿ ರೈತರ ಬದುಕು ವಾತ್ರವಲ್ಲದೆ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮೇಲೆ ಬೀರುತ್ತಿದೆ. ಜನಗಣತಿ ಅಂಕಿ-ಅಂಶಗಳು ಪ್ರಕಾರ 1991ರ ಆರ್ಥಿಕ ಉದಾರೀಕರಣದ ನಂತರ, 2001ರ ನಡುವೆ ಸುವಾರು 72 ಲಕ್ಷ ರೈತರು ಕೃಷಿಂುನ್ನು ತೊರೆದರೆ, 2001ರಿಂದ 2011ರವರೆಗೆ 77 ಲಕ್ಷ ರೈತರು ಕೃಷಿ ವೃತ್ತಿಯಿಂದ ದೂರ ಸರಿದಿದ್ದಾರೆ. ಸರಾಸರಿ ದಿನಕ್ಕೆ 2000ಕ್ಕೂ ಹೆಚ್ಚು ರೈತರು ಕೃಷಿ ಬಿಟ್ಟುಬಿಡುತ್ತಿದ್ದಾರೆ. ಈ ರೈತರು ನಗರಗಳಲ್ಲಿ ಚಾಲಕರು, ಕೂಲಿ ಕಾರ್ಮಿಕರು, ಸಣ್ಣ ಉದ್ಯೋಗಿಗಳಾಗಿ ಬದುಕು ಸಾಗಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಸಿ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು.