ರೈತರಿಗೆ ತಕ್ಷಣ ಹಣ ಪಾವತಿಸಲಿ

ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿರುವ ರೈತರಿಗೆ ಸರ್ಕಾರ ತಕ್ಷಣ ಹಣ ಪಾವತಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸಿದ್ದಾರೆ.
ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿರುವ ರೈತರಿಗೆ ಸರ್ಕಾರ ತಕ್ಷಣ ಹಣ ಪಾವತಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸಿದ್ದಾರೆ.
Published on
ಹುಣಸೂರು: ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿರುವ ರೈತರಿಗೆ ಸರ್ಕಾರ ತಕ್ಷಣ ಹಣ ಪಾವತಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸಿದ್ದಾರೆ.
ತಿಂಗಳ ಹಿಂದೆ ರಾಗಿ ಖರೀದಿ ಕೇಂದ್ರ ಆರಂಭಗೊಂಡಿದೆ. ತಾಲೂಕಿನಲ್ಲಿ ಈಗಾಗಲೇ 5000 ರೈತರು ನೋಂದಾಯಿಸಿಕೊಂಡು 2300 ಜನ ರಾಗಿ ಮಾರಾಟ ಮಾಡಿದ್ದಾರೆ. ಒಟ್ಟು 1,27,000 ಟನ್ ಅಧಿಕೃತವಾಗಿ ರಾಗಿ ಸಂಗ್ರಹ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಈ ಪೈಕಿ ಈಗಾಗಲೇ 65 ಸಾವಿರ ಟನ್ ರಾಗಿ ಮಾರಾಟ ಮಾಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಮಾರಾಟ ಮಾಡಿದ ರೈತರಿಗೆ ಇಂದಿಗೂ ಹಣ ತಲುಪಿಲ್ಲ. ಕೇಂದ್ರಕ್ಕೆ ಮಾರಾಟ ಮಾಡಿದ ವಾರದೊಳಗೆ ರೈತರ ಖಾತೆ ಹಣ ಜಮೆಯಾಗಬೇಕೆಂಬ ನಿಯಮವಿದ್ದರೂ ಸರ್ಕಾರ ವಿಳಂಬನೀತಿ ಅನುಸರಿಸುತ್ತಿರುವುದನ್ನು ಖಂಡಿಸಿದ್ದಾರೆ.
ರೈತರು ಸಾಲಸೋಲ ಮಾಡಿ ಬೆಳೆದಿದ್ದಾರೆ. ಸಾಲ ತೀರಿಸುವ ಜವಾಬ್ದಾರಿ ಇದ್ದು, ಸಾಲಕ್ಕೆ ಬಡ್ಡಿ ಕಟ್ಟುವ ದುಸ್ಥಿತಿ ಬಂದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ದಲ್ಲಾಳಿಗಳಿಗೆ ಮಾರಾಟ ಮಾಡುವುದೇ ಉತ್ತಮ ಎನ್ನುವ ಮನೋಭಾವನೆ ಹೊಂದುತ್ತಾರೆ. ಇದು ಸರ್ಕಾರವೇ ಪರೋಕ್ಷವಾಗಿ ದಲ್ಲಾಳಿಗಳಿಗೆ ಪ್ರೋತ್ಸಾಹ ನೀಡಿದಂತಾಗಲಿದೆ. ಕೂಡಲೇ ಸರ್ಕಾರ ರೈತರ ಖಾತೆಗೆ ಹಣ ಜಮಾಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತ ಸಂಘವು ಪ್ರತಿಭಟನೆ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net