ಎಫ್‌ಪಿಒನಿಂದ ರೈತಸ್ನೇಹಿ ಕಾರ್ಯ

ಸರಗೂರು ತಾಲೂಕಿನ ಬಿ. ಮಟಕೆರೆ ಗ್ರಾಮದ ಸರಗೂರು ರೈತ ಉತ್ಪಾದಕರ ಕಂಪನಿಯ ಪದಾಧಿಕಾರಿಗಳು ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಕೃಷಿ ಇಲಾಖೆಯಿಂದ ರೈತರಿಗೆ ನೆರವು ನೀಡುವಂತೆ ಮನವಿ ಮಾಡಿದರು. ಎಂ.ಕೆ. ಹರಿದಾಸ್, ಎಚ್.ಎನ್.ಸುಧೀರ್, ದೇವದಾಸ್ ಇತರರು ಇದ್ದರು.
ಸರಗೂರು ತಾಲೂಕಿನ ಬಿ. ಮಟಕೆರೆ ಗ್ರಾಮದ ಸರಗೂರು ರೈತ ಉತ್ಪಾದಕರ ಕಂಪನಿಯ ಪದಾಧಿಕಾರಿಗಳು ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಕೃಷಿ ಇಲಾಖೆಯಿಂದ ರೈತರಿಗೆ ನೆರವು ನೀಡುವಂತೆ ಮನವಿ ಮಾಡಿದರು. ಎಂ.ಕೆ. ಹರಿದಾಸ್, ಎಚ್.ಎನ್.ಸುಧೀರ್, ದೇವದಾಸ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Farmer-friendly

ಸರಗೂರು:

ಎಫ್‌ಪಿಒನಲ್ಲಿ ಸುಮಾರು 1,500 ರೈತರು ನೋಂದಣಿಯಾಗಿದ್ದು, ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು, ಉತ್ಪನ್ನಗಳ ಸಂಗ್ರಹಣೆ ಹಾಗೂ ಮಾರಾಟಕ್ಕೆ ಅನುಕೂಲ ಕಲ್ಪಿಸುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಕೈಗೊಳ್ಳಲು ಸಂಸ್ಥೆ ಮುಂದಾಗಿದೆ ಎಂದು ಸರಗೂರು ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಎಂ.ಕೆ. ಹರಿದಾಸ್ ತಿಳಿಸಿದರು.

ತಾಲೂಕಿನ ಬಿ.ಮಟಕೆರೆ ಗ್ರಾಮದ ಸರಗೂರು ರೈತ ಉತ್ಪಾದಕರ ಕಂಪನಿ ಲಿಮಿಟೆಡ್ (ಎಫ್‌ಪಿಒ) ವತಿಯಿಂದ ಮಂಗಳವಾರ ರೈತರಿಗೆ ಕೃಷಿ ಇಲಾಖೆಯ ಯೋಜನೆಯಡಿ ಅಗತ್ಯಗೆ ನೆರವು ಹಾಗೂ ಸಹಕಾರ ನೀಡುವಂತೆ ಶಾಸಕರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ನಮ್ಮ ಎಫ್‌ಪಿಒ ವ್ಯಾಪ್ತಿಯಲ್ಲಿ ಬಿ.ಮಟಕೆರೆ ಹಾಗೂ ಹೆಗ್ಗನೂರು ಗ್ರಾಮ ಪಂಚಾಯಿತಿಗಳು ಬರಲಿದ್ದು, ಈ ಭಾಗದ ರೈತರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ರೈತರಿಗೆ ಕಡಿಮೆ ದರದಲ್ಲಿ ಕೃಷಿ ಪರಿಕರಗಳು ಹಾಗೂ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು.
ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸುವುದು ಹಾಗೂ ಮಧ್ಯವರ್ತಿಗಳ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಎಫ್‌ಪಿಒ ಕಾರ್ಯನಿರ್ವಹಿಸುತ್ತಿದೆ. ರೈತ ಉತ್ಪಾದಕರ ಕಂಪನಿಯು ಇನ್ನಷ್ಟು ಬೆಳೆಯಲು ಹಾಗೂ ಹೆಚ್ಚಿನ ರೈತರಿಗೆ ಅನುಕೂಲವಾಗಲು ರೈತರು ಸಂಸ್ಥೆಯೊಂದಿಗೆ ಕೈಜೋಡಿಸಿ ಸಹಕರಿಸಬೇಕು ಎಂದು ತಿಳಿಸಿದರು.
ಎ್ಪಿಒ ಕಂಪನಿ ಉಪಾಧ್ಯಕ್ಷ ಎಚ್.ಎನ್. ಸುಧೀರ್, ನಿರ್ದೇಶಕರಾದ ದೇವದಾಸ್, ಕೂಡಗಿ ಗೋವಿಂದರಾಜು, ಪುಟ್ಟನಂಜಯ್ಯ, ಅಪ್ಪಾಜಿ, ಎಂ.ಕೆ. ಕೃಷ್ಣಪ್ಪ, ಎಚ್.ಎಸ್. ಸತೀಶ್, ಕಾರ್ಯದರ್ಶಿ ಶಿಂಧು, ಮುಂಖಂಡರಾದ ರಮೇಶ್, ಗುಂಡಪಾಲ್, ರಾಜೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net