ಸೆಸ್ಕ್ ಎಂಡಿ ಮುನಿಗೋಪಾಲ್‌ರಾಜು ಅವರಿಗೆ ಬೀಳ್ಕೊಡುಗೆ

ಸೇವಾ ನಿವೃತ್ತಿ ಹೊಂದಿದ ಕೆ.ಎಂ.ಮುನಿಗೋಪಾಲ್ರಾಜು ಅವರನ್ನು ಸೆಸ್ಕ್‌ನಿಂದ ಗೌರವಿಸಲಾಯಿತು. ಎ.ಬಿ.ರಮೇಶ ಬಂಡಿಸಿದ್ದೇಗೌಡ, ಡಿ.ಜೆ. ದಿವಾಕರ್, ಎಲ್. ಲೋಕೇಶ್, ಜಿ. ರೇಣುಕಾ, ಶರಣಮ್ಮ ಜಂಗಿನ್, ಲಿಂಗರಾಜಮ್ಮ, ಬಿ.ಆರ್. ರೂಪಾ, ಸುನೀಲ್ ಕುಮಾರ್, ಸೋಮಶೇಖರ್ ಇತರರು ಇದ್ದರು.
ಸೇವಾ ನಿವೃತ್ತಿ ಹೊಂದಿದ ಕೆ.ಎಂ.ಮುನಿಗೋಪಾಲ್ರಾಜು ಅವರನ್ನು ಸೆಸ್ಕ್‌ನಿಂದ ಗೌರವಿಸಲಾಯಿತು. ಎ.ಬಿ.ರಮೇಶ ಬಂಡಿಸಿದ್ದೇಗೌಡ, ಡಿ.ಜೆ. ದಿವಾಕರ್, ಎಲ್. ಲೋಕೇಶ್, ಜಿ. ರೇಣುಕಾ, ಶರಣಮ್ಮ ಜಂಗಿನ್, ಲಿಂಗರಾಜಮ್ಮ, ಬಿ.ಆರ್. ರೂಪಾ, ಸುನೀಲ್ ಕುಮಾರ್, ಸೋಮಶೇಖರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಲಸ ಮಾಡಲು ಎಲ್ಲರಿಂದಲೂ ಉತ್ತಮ ಸಹಕಾರ ಲಭಿಸಿದೆ
  • ಯಾವುದೇ ಯೋಜನೆಗಳ ಅನುಷ್ಠಾನ ಮತ್ತು ನಿರ್ಧಾರಗಳಲ್ಲಿ ದೃಢ ನಿಲುವು ಇತ್ತು
ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲರಾಜು ಅವರು ಸೇವೆಯಿಂದ ನಿವೃತ್ತಿ ಹೊಂದಿದ್ದು, ನಿಗಮದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿಗಮದ ಅಧಿಕಾರಿಗಳು, ಸಿಬ್ಬಂದಿ, ಕೆ.ಎಂ. ಮುನಿಗೋಪಾಲ್ರಾಜು ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು.
ಸೆಸ್ಕ್ ಅಧ್ಯಕ್ಷರೂ ಆದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕೆ.ಎಂ.ಮುನಿಗೋಪಾಲ್ರಾಜು ಅವರು ಬಂಡೆಯಂತಹ ವ್ಯಕ್ತಿತ್ವ ಹೊಂದಿದ್ದು, ಕೆಲಸದ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಯಾರನ್ನೂ ನೋಯಿಸದೆ ಗೌರವಯುತವಾಗಿ ಕಾರ್ಯನಿರ್ವಹಿಸುವ ಗುಣ ಹೊಂದಿದ್ದರು ಎಂದು ಬಣ್ಣಿಸಿದರು.
ಯಾವುದೇ ಯೋಜನೆಗಳ ಅನುಷ್ಠಾನ ಮತ್ತು ನಿರ್ಧಾರಗಳಲ್ಲಿ ದೃಢ ನಿಲುವು ತಾಳುತ್ತಿದ್ದ ಅವರು, ಜವಾಬ್ದಾರಿಯುತ ವ್ಯಕ್ತಿಯಾಗಿ ಮಾರ್ಗದರ್ಶನ ನೀಡುತ್ತಿದ್ದರು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಸಹಕಾರದಿಂದ ಯಶಸ್ಸು ಸಿಕ್ಕಿದೆ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮುನಿಗೋಪಾಲ್ ರಾಜು, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಲು ಎಲ್ಲರಿಂದಲೂ ಉತ್ತಮ ಸಹಕಾರ ಲಭಿಸಿದೆ ಎಂದು ಹೇಳಿದರು.
ನಿಗಮದ ಅಧ್ಯಕ್ಷರು ಕೆಲಸದ ಪ್ರತಿಯೊಂದು ಹಂತದಲ್ಲೂ ಕೈಜೋಡಿಸಿದ್ದು, ಎಂಡಿಯಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸಿ, ನಿಗಮದ ಕಾರ್ಯಗಳು ಸುಗಮವಾಗಿ ನಡೆಯಲು ನೆರವಾಗಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಿಗಮ ಕಚೇರಿಯಲ್ಲಿ ತಾಂತ್ರಿಕ ನಿರ್ದೇಶಕರಿಂದ ಹಿಡಿದು ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದ ಯಶಸ್ಸಿನಲ್ಲಿ ಹಲವರ ಸಹಕಾರವಿದ್ದು, ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದರ ಪರಿಣಾಮ ದೊಡ್ಡಮಟ್ಟದ ಯಶಸ್ಸು ದೊರೆತಿದೆ ಎಂದು ಹೇಳಿ, ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಹಲವು ಅಧಿಕಾರಿಗಳು, ಮುನಿಗೋಪಾಲ್ ರಾಜು ಅವರ ನಾಯಕತ್ವ, ಕಾರ್ಯವೈಖರಿ ಮತ್ತು ಸ್ನೇಹಪರ ವ್ಯಕ್ತಿತ್ವವನ್ನು ಸ್ಮರಿಸಿ ಶುಭ ಹಾರೈಸಿದರು.
ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್, ಪ್ರಮುಖ ಅಧಿಕಾರಿಗಳಾದ ಎಲ್.ಲೋಕೇಶ್, ಜಿ.ರೇಣುಕಾ, ಶರಣಮ್ಮ ಜಂಗಿನ್, ಲಿಂಗರಾಜಮ್ಮ, ಬಿ.ಆರ್.ರೂಪಾ, ಸುನೀಲ್ ಕುಮಾರ್, ಸೋಮಶೇಖರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net