ಬೈಚನಹಳ್ಳಿಯ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ ಹಾಗೂ ಶಾರದಾ ಪೂಜೆ ಕಾರ್ಯಕ್ರಮ
ಅರಕಲಗೂಡು ತಾಲೂಕಿನ ಬೈಚನಹಳ್ಳಿಯ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರಘುವರ, ಡಿ.ಕೆ.ಕುಮಾರಯ್ಯ, ಸುರೇಶ್ ಬಾಬು, ಎಂ.ಎಚ್.ದಿನೇಶ್, ರೂಪಾ, ಶಿವಣ್ಣ, ಅರ್ಚನಾ, ಲಿಖಿತ್, ಪರಮೇಶ್, ನಂಜುಂಡಸ್ವಾಮಿ, ಇಂಚರ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಸುವುದೇ ಗುರಿಯಾಗದಿರಲಿ : ರಘುವರ
ಅರಕಲಗೂಡು: ಪಿಯುಸಿ ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಸುವುದೇ ಗುರಿಯಾಗಬಾರದು. ಮುಂದಿನ ಭವಿಷ್ಯದಲ್ಲಿ ತಾವು ಏನಾಗಬೇಕು ಎಂಬುದನ್ನು ಈಗಲೇ ನಿರ್ಧಾರ ಮಾಡಬೇಕು ಎಂದು ಬೈಚನಹಳ್ಳಿಯ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ರಘುವರ ಹೇಳಿದರು.
ತಾಲೂಕಿನ ಬೈಚನಹಳ್ಳಿಯ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಹಾಗೂ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನಾರ್ಜನೆ ಜೀವನದಲ್ಲಿ ಬುದ್ಧಿಯ ಜತೆಗೆ ಶಿಸ್ತು, ಸಂಯಮ ಕಲಿಸಿಕೊಡುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ನಿರಂತರ ಅಧ್ಯಯನದಿಂದ ಜ್ಞ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ಜೀವನದ ಭವಿಷ್ಯ ರೂಪಿಸುವಲ್ಲಿ ದ್ವಿತೀಯ ಪಿಯುಸಿ ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ಉತ್ತಮ ಅಂಕ ಪಡೆದು ಪಾಲಕರ ಆಸೆಯನ್ನು ಈಡೇರಿಸಬೇಕು. ಜತೆಗೆ ಭವಿಷ್ಯದಲ್ಲಿ ತಾವು ಏನಾಗಬೇಕು ಎಂಬ ಗುರಿಯನ್ನು ಹೊಂದಬೇಕು. ಆ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಬೇಕು ಎಂದರು.
ಈಗ ಲಭಿಸಿರುವ ಅವಕಾಶಗಳನ್ನು ಅಪವ್ಯಯ ಮಾಡಿಕೊಳ್ಳಬಾರದು. ಪರೀಕ್ಷೆಗೆ ಉಳಿದಿರುವ ಕಡಿಮೆ ಸಮಯದಲ್ಲೂ ಅತ್ಯಂತ ಜಾಗರೂಕತೆಯಿಂದ ವ್ಯಾಸಂಗ ಮಾಡುವ ಮೂಲಕ ಗುರಿ ಸಾಧಿಸಬೇಕು. ನಮ್ಮ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಹಿರಿಯರ ಪಾತ್ರ ಅಪಾರವಾಗಿದ್ದು, ಅದನ್ನ ಉಳಿಸಿ, ಬೆಳೆಸಿಕೊಂಡು ಹೋಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಂಶುಪಾಲ ಡಿ.ಕೆ.ಕುಮಾರಯ್ಯ ಮಾತನಾಡಿ, ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡುವ ಮೂಲಕ ಉತ್ತಮ ಫಲಿತಾಂಶವನ್ನು ಪಡೆದು ಕೀರ್ತಿ ತರಬೇಕು. ವಿದ್ಯಾರ್ಥಿಗಳು ತಮ್ಮ ಆಲೋಚನೆ, ಭಾವನೆ ಶುದ್ಧವಾಗಿಟ್ಟುಕೊಳ್ಳಬೇಕು. ದ್ವಿತೀಯ ಪಿಯುಸಿ ನಿಮ್ಮ ಭವಿಷ್ಯದ ಬದುಕಿನ ಮಾರ್ಗ ನಿರ್ಧರಿಸುವುದರಿಂದ ವಿದ್ಯಾರ್ಥಿಗಳು ಉಳಿದ ಸಮಯದಲ್ಲಿ ಅಧ್ಯಯನ ದತ್ತ ಹೆಚ್ಚು ಗಮನಹರಿಸಿ ಉತ್ತಮ ಸಾಧನೆ ಮಾಡುವಂತೆ ತಿಳಿಸಿದರು.