ಮಠದ ವಿರುದ್ಧ ಸುಳ್ಳು ಆರೋಪ

 ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ
ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ
Published on
ಮೈಸೂರು: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಉರಿಲಿಂಗಿ ಪೆದ್ದೀಶ್ವರ ಸಂಸ್ಥಾನ ಮಠ ಹಾಗೂ ನಗರದ ಗಾಂಧಿನಗರದಲ್ಲಿನ ಉರಿಲಿಂಗಿ ಪೆದ್ದಿ ಶಾಖಾ ಮಠದ ಬಗ್ಗೆ ಶಿವಲಿಂಗ ಸ್ವಾಮಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ತಾವು ಎರಡೂ ಮಠಕ್ಕೆ ಅಧ್ಯಕ್ಷರು. ಶಿವಲಿಂಗ ಸ್ವಾಮಿಗೂ ಈ ಮಠಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಸುದೀರ್ಘವಾಗಿ 30 ವರ್ಷಗಳಿಂದ ಇದೇ ರೀತಿಯ ಆರೋಪ ಮಾಡುತ್ತ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆಗಳನ್ನು ಸುತ್ತುತ್ತಿದ್ದಾರೆ. ಅವರ ದಾವೆಗಳಿಂದಾಗಿ ಸಂಸ್ಥಾನ ಮಠಕ್ಕೆ ಸುಮಾರು 10 ಕೋಟಿ ರೂ. ನಷ್ಟವಾಗಿದೆ. 1994-95ರಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಅವ್ಯವಹಾರ ನಡೆಸಿರುವ ಕಾರಣ ಸಂಸ್ಥೆಯಿಂದ ಅವರನ್ನು ವಜಾಗೊಳಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಸ್ಥಾನದ 4ನೇ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಡಾ.ನಂಜುಂಡಸ್ವಾಮಿ ಟ್ರಸ್ಟ್ ಹಾಗೂ ಭಕ್ತರ ಸಮ್ಮುಖದಲ್ಲಿ ತಮ್ಮನ್ನು 5ನೇ ಉತ್ತರಾಧಿಕಾರಿ ಎಂದು ಘೋಷಿಸಿ, ಉಯಿಲು ಬರೆಯಿಸಿ ಸಹಿ ಹಾಕಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net