ಬಹಳಷ್ಟು ಅಧಿಕಾರಿಗಳು ಕಚೇರಿಗೆ ಅಂಟಿಕೊಂಡಿದ್ದು, ಇದರಿಂದ ಸರ್ಕಾರಿ ಯೋಜನೆಗಳ ಅನುಷ್ಠಾನ, ಹಳ್ಳಿಗಳ ಅಭಿವೃದ್ಧಿಯಲ್ಲಿ ಎಡವಿದ್ದೇವೆ. ಆದ್ದರಿಂದ ವಾರಕ್ಕೆ ಒಮ್ಮೆಯಾದರೂ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡಿ ವಾಸ್ತವ ತಿಳಿದುಕೊಂಡು ಸಮಸ್ಯೆಗೆ ಪರಿಹಾರ ಕಲ್ಪಿಸಿ, ಕಳೆಹಂತ ಅಧಿಕಾರಿಗಳ ಮಾಹಿತಿ ಆಧಾರದ ಮೇಲೆಯೇ ವರದಿ ಸಿದ್ಧಪಡಿಸಿ ಕಳುಹಿಸಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶಿಸಿದರು.