ಸೀನಿಯರ್ ವಿಭಾಗದಲ್ಲಿ (8 ರಿಂದ 10ನೇ ತರಗತಿ) ಕೃಥ್ವಿನಿ ವಿಜಯ್ (ಪ್ರಥಮ), ಕ್ಯಾಪಿಟಲ್ ಪಬ್ಲಿಕ್ ಶಾಲೆಯ ಎಚ್.ಪಿ. ಪಾವನಿ (ದ್ವಿತೀಯ), ವಿಜಯ ವಿಠಲ ವಿದ್ಯಾಶಾಲೆಯ ಸಿರಿಶಾ (ತೃತೀಯ), ವಿವೇಕ ಬಾಲೋದ್ಯಾನ ಪಬ್ಲಿಕ್ ಶಾಲೆಯ ಪ್ರೀತಮ್ ಮತ್ತು ಎಸ್‌ಜೆಸಿಎಸ್ ಶಾಲೆಯ ಧೃತಿ ವಿ. ಶಾ ಸಮಾಧಾನಕರ ಬಹುಮಾನ ಪಡೆದರು. ತೀರ್ಪುಗಾರರಾಗಿ ಕಲಾನಿಕೇತನ ಆರ್ಟ್ ಕಾಲೇಜಿನ ಉಪನ್ಯಾಸಕ ಡಾ.ವಿಠಲ ರೆಡ್ಡಿ, ಹಿರಿಯ ಚಿತ್ರಕಲಾವಿದರಾದ ಎಲ್. ಶಿವಲಿಂಗಪ್ಪ, ಜಂಬುಕೇಶ್ವರ, ಲಲಿತಕಲಾ ಅಕಾಡೆಮಿ ಸದಸ್ಯ ಡಿ. ಅಭಿಲಾಷ್ ಕಾರ್ಯನಿರ್ವಹಿಸಿದರು.