ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ಹೊದಿಕೆ ವಿತರಣೆ

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಗತಿಕರಿಗೆ ಹೊದಿಕೆ ವಿತರಿಸಲಾಯಿತು. ಕೆ.ಬಿ.ಲಿಂಗರಾಜು, ವಿಕ್ರಂ ಅಯ್ಯಂಗಾರ್, ಜೋಗಿ ಮಂಜು, ಮಂಜುನಾಥ್, ಅಜಯ್ ಶಾಸ್ತ್ರಿ, ಎಸ್.ಬಿ.ರಾಮು, ಎಸ್.ಎನ್.ರಾಜೇಶ್, ಸಚಿನ್ ನಾಯಕ್, ಅಮಿತ್ ಇತರರು ಇದ್ದರು.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಗತಿಕರಿಗೆ ಹೊದಿಕೆ ವಿತರಿಸಲಾಯಿತು. ಕೆ.ಬಿ.ಲಿಂಗರಾಜು, ವಿಕ್ರಂ ಅಯ್ಯಂಗಾರ್, ಜೋಗಿ ಮಂಜು, ಮಂಜುನಾಥ್, ಅಜಯ್ ಶಾಸ್ತ್ರಿ, ಎಸ್.ಬಿ.ರಾಮು, ಎಸ್.ಎನ್.ರಾಜೇಶ್, ಸಚಿನ್ ನಾಯಕ್, ಅಮಿತ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಬದಿ ಮಲಗುವವರಿಗೆ ಹೊದಿಕೆ ವಿತರಣಾ ಅಭಿಯಾನ
  • ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಫುಟ್ ಪಾತ್ ನಲ್ಲಿ ಇರುವವರಿಗೆ ವಿತರಣೆ
 ಮೈಸೂರು: ಬೀದಿ ಬದಿಯಲ್ಲಿ ಜೀವನ ಸಾಗಿಸುತ್ತಿರುವ ನಿರ್ಗತಿಕರಿಗೆ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಚಳಿಗಾಲಕ್ಕಾಗಿ ಹೊದಿಕೆ ವಿತರಿಸಲಾಯಿತು.
ಚಳಿಗಾಲದಲ್ಲಿ ವಾತಾವರಣದ ಪರಿಣಾಮ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹಾಗಾಗಿ ರಸ್ತೆ ಬದಿ ಮಲಗುವವರಿಗೆ ಹೊದಿಕೆ ವಿತರಣಾ ಅಭಿಯಾನಕ್ಕೆ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಚಾಲನೆ ನೀಡಲಾಯಿತು. 
ರೈಲ್ವೆ ನಿಲ್ದಾಣ ಮುಂಭಾಗ ರಸ್ತೆ ಬದಿಯಲ್ಲಿ ಮಲಗಿರುವ ಬಡವರ್ಗದವರಿಗೆ ಹೊದಿಕೆ ನೀಡುವ ಮೂಲಕ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ಅಭಿಯಾನಕ್ಕೆ ಚಾಲನೆ ನೀಡಿ, ಬಡವರಿಗೆ ಸೇವೆ ಸಲ್ಲಿಸಿದರೆ ದೇವರಿಗೆ ಸಲ್ಲುತ್ತದೆ. ಇಂತಹ ಸೇವೆಗೈದು ಮಾನವೀಯತೆ ಮೈಗೂಡಿಸಿಕೊಂಡು ಜೀವನ ಸಾಗಿಸಿ ಬದುಕನ್ನು ಹಸನಗೊಳಿಸಿ. ಈ ನಿಟ್ಟಿನಲ್ಲಿ ಕೆಎಂಪಿಕೆ ಟ್ರಸ್ಟ್ ಸೇವಾ ಕಾರ್ಯಕ್ಕೆ  ಶ್ಲಾಘಿನೀಯ ಎಂದರು. 
ಕೆ.ಎಂ.ಪಿ.ಕೆ. ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಸ್ನೇಹಿತರ ಸಹಕಾರದೊಂದಿಗೆ ಕಳೆದ 6 ವರ್ಷದಿಂದ ನಿರಂತರವಾಗಿ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಚಳಿಗಾಲ ಹಿನ್ನೆಲೆಯಲ್ಲಿ ನಗರದ ವಿವಿಧ ಸ್ಥಳಕ್ಕೆ ತೆರಳಿ ಅವರ ಸ್ಥಿತಿಗಳನ್ನು ನೋಡಿ ಹೊದಿಕೆ ವಿತರಿಸುತ್ತಾ ಬಂದಿದ್ದೇವೆ. ಜತೆಗೆ ಕೆಲವೊಂದು ಕಾಡಿನ ಹಾಡಿಗಳಿಗೆ ಭೇಟಿ ಕೊಟ್ಟು ಹೊದಿಕೆ ವಿತರಿಸಲಾಗುವುದು ಎಂದು ತಿಳಿಸಿದರು. 
ಬಿಜೆಪಿ ಮುಖಂಡ ಜೋಗಿ ಮಂಜು, ಕಡಕೊಳ ಆರೋಗ್ಯ ಅಧಿಕಾರಿ ಮಂಜುನಾಥ್, ನಿರೂಪಕ ಅಜಯ್ ಶಾಸ್ತ್ರಿ, ಮುಖಂಡರಾದ ಎಸ್. ಬಿ.ರಾಮು, ಎಸ್.ಎನ್.ರಾಜೇಶ್, ಸಚಿನ್ ನಾಯಕ್, ಅಮಿತ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net