ಕುರುಕಲು ತಿಂಡಿ ಸೇರಿದಂತೆ ಹಲವಾರು ಆಹಾರ ಪದಾರ್ಥಗಳನ್ನು ಎರಡು, ಮೂರು ಅಥವಾ ಹೆಚ್ಚು ಬಾರಿ ಕಾಯಿಸಿ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಪದಾರ್ಥಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸುವುದರ ಜತೆಗೆ ಮಾರಾಟಗಾರರು ಎಣ್ಣೆ ಖರೀದಿಸಿದ, ಬಳಸಿದ ಹಾಗೂ ಉಳಿಕೆಯನ್ನು ವಿಲೇವಾರಿ ಮಾಡಿರುವ ಕುರಿತು ಪರಿಶೀಲನೆ ನಡೆಸಬೇಕು ಎಂದು ಹೇಳಿದರು.