ಪಾರಂಪರಿಕ ನಗರಗಳ ಅಭಿವೃದ್ಧಿಗೆ ಕಾನೂನು ರೂಪಿಸಿ

ಮೈಸೂರಿನ ನಗರ ಪಾಲಿಕೆ ಕಚೇರಿ ಕಟ್ಟಡ
ಮೈಸೂರಿನ ನಗರ ಪಾಲಿಕೆ ಕಚೇರಿ ಕಟ್ಟಡ
Published on

ಪ್ರಮುಖ ಮುಖ್ಯಾಂಶಗಳು

  • ಸಂಸತ್‌ನಲ್ಲಿ ಸಂಸದ ಯದುವೀರ್ ಒತ್ತಾಯ
ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರು ಸೇರಿದಂತೆ ದೇಶದಲ್ಲಿರುವ ಪಾರಂಪರಿಕ ನಗರಗಳ ಅಭಿವೃದ್ಧಿಗೆ ಪೂರಕವಾದ ಕಾನೂನು ಚೌಕಟ್ಟು ರೂಪಿಸಲು ನಗರಾಭಿವೃದ್ಧಿ ಸಚಿವಾಲಯ ಮುಂದಾಗಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದ್ದಾರೆ.
ಸಂಸತ್ತಿನಲ್ಲಿ ಗುರುವಾರ ನಡೆದ ಕಲಾಪದ ಚರ್ಚೆಯಲ್ಲಿ ಈ ಸಂಬಂಧ ಒತ್ತಾಯಿಸಿದ್ದಾರೆ. ಮೈಸೂರು ಸೇರಿದಂತೆ ಭಾರತದ ಪಾರಂಪರಿಕ ನಗರಗಳು ಈಗ ಸಾಕಷ್ಟು ಆತಂಕ ಎದುರಿಸುತ್ತಿವೆ. ಅನಿಯಂತ್ರಿತ, ಅವೈಜ್ಞಾನಿಕ ನಗರೀಕರಣದಿಂದ ಸಮಸ್ಯೆ ಎದುರಾಗಿದೆ ಎಂದರು.
ಈ ಮೂಲಕ ಪಾರಂಪರಿಕತೆ ಬೆಳೆಸಲು ಸೂಕ್ತವಾಗಿ ಕಾನೂನು ಚೌಕಟ್ಟು, ನೀತಿ ರೂಪಿಸಲು ನಗರಾಭಿವೃದ್ಧಿ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಖಾಸಗಿ ಪಾಲುದಾರಿಕೆಯಲ್ಲಿ ಪರಿಣಾಮಕಾರಿ ಪಾರಂಪರಿಕ ಸಂರಕ್ಷಣೆ, ಡಿಜಿಟಲ್ ಮ್ಯಾಪಿಂಗ್, ನಗರ ವಸಾಹತು, ನಾಗರಿಕತೆ ಸಂರಕ್ಷಿಸಬೇಕಾಗಿದೆ. ನಮ್ಮ ಸಂಸ್ಕೃತಿ, ಸ್ಮರಣೆ, ಭಂಡಾರಗಳನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ಸಂಸದ ಯದುವೀರ್ ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net