ಪರಿಶಿಷ್ಟ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಗಂಗಾಧರ್ ಮಾತನಾಡಿ, ಜನರು ಸರ್ಕಾರ ಯೋಜನೆಗಳನ್ನು ಜಾರಿಗೊಳಿಸುವಾಗ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಮಕ್ಕಳನ್ನು ಶಿಕ್ಷಣಕ್ಕೆ ಹದಗೊಳಿಸಬೇಕು. ಜತೆಗೆ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಹಕ್ಕಿದೆ. ಆದಿವಾಸಿಗಳು ಸಂಘಟಿತರಾಗಿ ನಿಲ್ಲಬೇಕು ಎಂದರು. ಶಿಬಿರದ ಪ್ರಮುಖರಾದ ಉಪನ್ಯಾಸಕಿ ಡಾ. ಹೇಮಾ ಮುಂದಿನ ನಾಲ್ಕು ದಿನಗಳಲ್ಲಿ ಹಾಡಿ ಸಮೀಕ್ಷೆ, ಸಮಸ್ಯೆಗಳನ್ನು ಬಗೆಹರಿಸಲು ಸಂಪನ್ಮೂಲ ಗುರುತಿಸುವುದು, ಅರಿವಿನ ಬೀದಿನಾಟಕ ಪ್ರದರ್ಶನ ಹಾಡಿಗಳಲ್ಲಿ ಏರ್ಪಡಿಸಿಕೊಂಡಿದ್ದೇವೆ ಎಂದರು.