ಗಜಪಯಣದ ಸಂದರ್ಭ ಹೊಸ ಆನೆಗಳೊಂದಿಗೆ ಮೈಸೂರಿನತ್ತ ಹೆಜ್ಜೆ ಹಾಕುವ ಸಂದರ್ಭದಲ್ಲಿ, ಹಲವು ವರ್ಷಗಳ ಕಾಲ ದಸರೆಯ ಸಾರಥಿಯಾಗಿದ್ದ ಅಭಿಮನ್ಯುವಿನ ಸೇವಾ ಪಯಣಕ್ಕೆ ವೀರನಹೊಸಳ್ಳಿಯಲ್ಲಿ ಭಾವಪೂರ್ಣ ವಿದಾಯ ದೊರೆಯಲಿದೆ. ಅಂಬಾರಿ ಹೊತ್ತ ಆ ಗಂಭೀರ ಹೆಜ್ಜೆಗಳು ಇನ್ನು ದಸರೆಯ ಮೆರವಣಿಗೆಯಲ್ಲಿ ಕಾಣಿಸದಿದ್ದರೂ, ಅಭಿಮನ್ಯುವಿನ ಹೆಜ್ಜೆ ಗುರುತುಗಳು ಮೈಸೂರು ದಸರೆಯ ಇತಿಹಾಸದಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯಲಿವೆ.