ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, ಮತದಾರರ ಗಣತಿ ನಮೂನೆ ನೀಡಿದ ನಂತರ ಬಿಎಲ್‌ಎಗಳು ಅನಕ್ಷರಸ್ಥ ಕುಟುಂಬವಾಗಿದ್ದಲ್ಲಿ ಅರ್ಜಿ ಭರ್ತಿ ಮಾಡುವ, ಸ್ಥಳೀಯವಾಗಿ ಮರಣ ಹೊಂದಿದ ಮತದಾರರು, ಬೇರೆಡೆಗ ಸ್ಥಳಾಂತರವಾಗಿದ್ದು ಇಲ್ಲಿನ ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿದ್ದರೆ ಅಂತಹುದನ್ನು ಗುರುತಿಸುವ ಇವೇ ಮುಂತಾದ ಕಾರ್ಯಗಳಲ್ಲಿ ಪರಿಣಾಮಕಾರಿಯಾಗಿ ಬಿಎಲ್‌ಒಗಳೊಂದಿಗೆ ಸಹಕರಿಸಬೇಕು. ಒಬ್ಬ ವ್ಯಕ್ತಿ ಎರಡು ಕಡೆ ಮತದಾರನಾಗಿರುವುದು, ಮೃತವ್ಯಕ್ತಿಯ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕದಿರುವುದು ಮುಂತಾದವು ಪ್ರಜಾ ಪ್ರತಿನಿಧಿ ಕಾಯ್ದೆಗೆ ವಿರುದ್ಧವಾದುದಾಗಿದ್ದು, 10 ವರ್ಷಗಳ ಸಜೆ ವಿಧಿಸಬಹುದಾಗಿದೆ. ಹಾಗಾಗಿ ಬಿಎಲ್‌ಎಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.