ತಾಲೂಕಿನ ಸಮೀಪದ ಹ್ಯಾಂಡ್‌ಪೋಸ್ಟ್‌ನಲ್ಲಿ ಇತ್ತೀಚೆಗೆ ನಡೆದ ಯುವ ಬ್ರಿಗೇಡ್ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ವಕೀಲ ರಾಜಾಚಾರಿ, ಕಾರ್ಯದರ್ಶಿಯಾಗಿ ಎನ್.ಲೋಕೇಶ್, ಖಜಾಂಚಿಯಾಗಿ ಜನಾರ್ದನ್ ಸರ್ವಾನುಮತದಿಂದ ಆಯ್ಕೆಯಾದರು. ನಿರ್ದೇಶಕರಾದ ಕಿರಣ್, ದಾಸಾಚಾರಿ, ನಿಂಗರಾಜು, ವಸಂತ್ ಕುಮಾರ್, ಸಿದ್ದಪ್ಪಾಜಿ, ಪ್ರದೀಪ್ ಕುಮಾರ್, ರವಿ, ಸಾ.ನಾ. ಗೋವಿಂದರಾಜು, ಆರ್.ಟಿ.ವಿಜಯ ಕುಮಾರ್, ನಾಗೇಶ್ ಎಸ್.ಆಚಾರ್, ಶೇಖರ್, ನಾಗೇಂದ್ರ, ವಿನೋದ್ ಕುಮಾರ್, ವೆಂಕಟೇಶ, ಚಂದನ್ ಇನ್ನಿತರರು ಹಾಜರಿದ್ದರು.