ಎಚ್.ಡಿ.ಕೋಟೆ: ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಎಚ್.ಡಿ.ಕೋಟೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಹಿರೇಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಜಿ.ಪ್ರಮೋದ್‌ಕುಮಾರ್ ಮತ್ತು ಕಾರ್ಯದರ್ಶಿಯಾಗಿ ಎಚ್.ಡಿ.ಕೋಟೆ ಬಾಲಕರ ಪ್ರೌಢಶಾಲೆಯ ಶಿಕ್ಚಕ ಆನಂದ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.